“ಕೋವಿಡ್” ಅದೊಂದು ಮಾರಕ ಸೋಂಕಲ್ಲ, ಅದು ಆಳುವವರ ಮಾಫಿಯಾ ಎನ್ನುವುದು ಸತ್ಯವಾಗ್ತಿದೆ. ಕೋವಿಡ್ ಹೆಸರಿಲ್ಲಿ ಕೋಟಿ ಗಟ್ಟಲೆ ನುಂಗಿ ತೇಗುತ್ತಿರುವವರ ಅಸಲಿ ಮುಖ ಬಯಲಾಗ್ತಿದೆ. ಹೆಣದ ಮುಂದಿಟ್ಟುಕೊಂಡು ದಂಧೆ ನಡೆಸುತ್ತಿರುವ ವಿಷಯ ನಿಧಾನವಾಗಿ ಒಂದೊಂದಗಿ ಹೊರ ಬರುತ್ತಿದೆ.
ಕೋವಿಡ್ ಇಂದ ಮೃತರಾದವರನ್ನು ಸತ್ತ ನಾಯಿ, ನರಿಗಳನ್ನು ಮಣ್ಣು ಮಾಡಿದ ಅಮಾನುಷ ಘಟನೆಗಳನ್ನೆಲ್ಲಾ ಕಂಡು ಹಳಸಿ ಹೋಗಿ ಆಯ್ತು. ಈಗ ಯಾರದ್ದೋ ಹೆಸರಿನಲ್ಲಿ ಇನ್ಯಾರದ್ದೋ ಶವ ಕಳುಹಿಸಿ ಉಡುಪಿಯ ಕೋವಿಡ್ ಆಸ್ಪತ್ರೆಯೊಂದು ಯಡವಟ್ಟು ಮಾಡಿಕೊಂಡಿರುವ ವಿಚಾರ ಸಾಮಾಜಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಸೋಂಕು ದಂಧೆಯಾಗಿ ಬದಲಾಗಿದ್ದು ನೇರಾನೇರವಾಗಿ ಕಾಣಸಿಗುತ್ತಿದೆ.
ಇನ್ನು, ಖಾಸಗಿ ಆಸ್ಪತ್ರೆಗಳು ಡಬ್ಬಲ್ ಬಿಲ್ ಮಾಡಿದ್ದಾಯ್ತು, ಸಾಮಾನ್ಯ ಹೊರ ರೋಗಿಗಳನ್ನು ನಿರ್ಲಕ್ಷಿಸಿದ್ದಾಯ್ತು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಡ ಹಾಗೂ ನಿರ್ಗತಿಕ ರೋಗಿಗಳನ್ನು ಅಪರಾತ್ರಿಯಲ್ಲಿ ಎಲ್ಲೆಲ್ಲೋ ನಡು ದಾರಿಯಲ್ಲಿ ಬಿಟ್ಟು ಕ್ರೂರತನ ತೋರಿಸಿದ್ದೂ ಮುಗಿಯಿತು. ಈಗ ಅಮಾಯಕರ ಬದುಕಿನೊಂದಿಗೆ ಆಟ ಆಡುತ್ತಿವೆ. ಕ್ವಾರಂಟೈನ್ ವಿಷಯದಲ್ಲಿ ಆಸ್ಪತ್ರೆಯೊಂದಿಗೆ, ಹೋಟೇಲ್ ಮಾಲೀಕರೊಂದಿಗೆ ರಾಜಕೀಯ ನಾಯಕರುಗಳು, ಜಿಲ್ಲಾಧಿಕಾರಿಗಳು ಶಾಮೀಲು ಮಾಡಿಕೊಂಡು ಬಡವರ ಕಷ್ಟದ ಹಣವನ್ನು ನುಂಗಿ ಕಕ್ಕಿದ್ದಾದರೂ ಇನ್ನೂ ಸಾಲದೇನೋ..
ಈಗ ಕೋವಿಡ್ ಹೆಸರಿನಲ್ಲಿ ಯರ‍್ಯಾರದ್ದೋ ಶವ ಕಳುಹಿಸಿಕೊಡುವುದು ಆರಂಭವಾಗಿದೆ. ಇಷ್ಟೆಲ್ಲಾ ಯಡವಟ್ಟು ಮಾಡುವ ಆಸ್ಪತ್ರೆಗಳು.. ಪಿಪಿಇ ಕಿಟ್ ಅಲ್ಲಿ ಪ್ಯಾಕ್ ಮಾಡಲಾಗುವ, “ಕೋವಿಡ್‌ನಿಂದ ಮೃತರಾದವರ ಶವ ಎಂದು ಹೇಳಲಾಗುವ” ಆ ಮೃತ ದೇಹದ ಅಂಗಾಂಗಗಳನ್ನು ಕದ್ದಿರಲು ಸಾಧ್ಯವಿಲ್ಲವೇ..? ಎನ್ನುವ ಆತಂಕಕಾರಿಯಾದ ಪ್ರಶ್ನೆ ಈಗ ಕಾಡ್ತಿದೆ. ಆ್ಯಂಬುಲೆನ್ಸ್ನಲ್ಲಿ ಪಿಪಿಇ ಕಿಟ್‌ಗಳಿಂದ ಕವರ್ ಮಾಡಿ ಯಾವುದೋ ಲಾರಿಗಳಲ್ಲೋ, ಗೂಡ್ಸ್ ವಾಹನಗಳಲ್ಲೋ ಪಾರ್ಸೆಲ್ ಕಳುಹಿಸದ ಹಾಗೆ ಸ್ಮಶಾನಕ್ಕೆ ಹೆಣ ಕಳುಹಿಸಿ, ಕುಟುಂಬದವರಿಗೆ ಸರಿಯಾಗಿ ನೋಡುವುದಕ್ಕೂ ಬಿಡದೇ ಮಣ್ಣು ಮಾಡಲಾಗುವ ಆ ದೇಹದಲ್ಲಿನ ಎಷ್ಟು ಅಂಗಾಂಗಗಳನ್ನು ಕದ್ದು, ಮಾರಿ ಹಣ ಮಾಡಿರಲಿಕ್ಕಿಲ್ಲ..? ನಿಜ, ದೊಡ್ಡದೊಂದು ಮೆಡಿಕಲ್ ಮಾಫಿಯ ನಡೆಯುತ್ತಿದೆ ಎನ್ನುವುದರಲ್ಲಿ ಅನುಮಾನವೇ ಬೇಕಾಗಿಲ್ಲ.
ಸುಳ್ಳು ಬರೀ ಸುಳ್ಳು, ಎಲ್ಲವೂ ಹಸಿ ಹಸಿ ಸುಳ್ಳು. ಕೋವಿಡ್ “ಮಾಫಿಯಾ” ಹೊರತಾಗಿ ಬೇರೇನೂ ಅಲ್ಲ. ಇದು ವೈದ್ಯಕೀಯ ವರ್ಗದೊಂದಿಗೆ ಆಳುವವರ ದೊಡ್ಡ ದಂಧೆ ಎನ್ನುವುದರಲ್ಲಿ ಯಾವುದೇ ಸಂದೇಹ ಪಡಬೇಕಾಗಿಲ್ಲ. ಖಾಸಗಿ ಆಸ್ಪತ್ರೆಗಳು ಈಗಿನ ಕೋವಿಡ್ ಸಂಕಟದ ಕಾಲದಲ್ಲಿ ಬಡ, ನಿರ್ಗತಿಕರ, ಮಧ್ಯಮವರ್ಗದವರ ಸುಲಿಗೆಯಲ್ಲಿ ತೊಡಗಿವೆ ಎನ್ನುವುದಕ್ಕೆ ಇದು ಅಪ್ಪಟ ಸಾಕ್ಷಿ. ಕ್ಯಾರೇ ಇಲ್ಲದಂತೆ ವರ್ತಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಅಸಲಿ ಮುಖ ಇದು. ಇಡಿಯ ದೇಶದಲ್ಲಿ ಬಿಳಿ ಕೋಟಿನ ಲೂಟಿಕೋರರ ಹಾವಳಿ ಅತಿಯಾಗಿದೆ ಎನ್ನುವುದರಲ್ಲಿ ನೋ ಡೌಟ್ಸ್.
ಹೈಟೆಕ್ ಆಸ್ಪತ್ರೆಗಳಲ್ಲಿ “ಸೇಲ್ಸ್ ರಿವ್ಯೂ” ಮಾಡಲಾಗುತ್ತದೆ ಎಂಬ ವಿಚಾರ ನಿಮಗೂ ಗೊತ್ತಿರಬಹುದು. ಡಾಕ್ಟರ್‌ಗಳನ್ನು ಕೂರಿಸಿಕೊಂಡು ಎಷ್ಟು ಲಾಭ ಬಂತು ..? ಅಂತ ಮೀಟಿಂಗ್ ಮಾಡಲಾಗ್ತದೆ. ಯಾವ ಡಾಕ್ಟರ್ ಎಷ್ಟು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುತ್ತಾನೆ. ಆತನಿಂದ ಎಷ್ಟು ಲಾಭ ಆಸ್ಪತ್ರೆಗೆ ಬರುತ್ತದೆ ಎಲ್ಲವನ್ನೂ ಮಾಡಲಾಗ್ತದೆ. ‘ಆಪರೇಷನ್ ಟಾರ್ಗೇಟ್’, ಒಬ್ಬ ರೋಗಿಯನ್ನು ಬದುಕಿಸುವುದು ಮತ್ತು ಸಾಯಿಸುವುದನ್ನು ಆಸ್ಪತ್ರೆಯ ಮಂಡಳಿ ಡಿಸೈಡ್ ಮಾಡುತ್ತದೆ ಅಂದರೆ ನೀವು ಅಚ್ಚರಿ ಪಡಬೇಕಾಗಿಲ್ಲ.
ಹೌದು. ಈ ಕೋವಿಡ್ ಆರಂಭವಾದ ಮೇಲೆ ಆಗಿದ್ದೆಲ್ಲವೂ ಇಂತದ್ದೇ ಅಂತ ಬಿಡಿಸಿ ಬಿಡಿ ಬಿಡಿಯಾಗಿ ಹೇಳುವ ಅಗತ್ಯವೇನೂ ಇಲ್ಲ. ಪಕ್ಕಾ ದಂಧೆ ಆಗಿ ಬಿಟ್ಟಿದೆ. ಕೋವಿಡ್ ಪರೀಕ್ಷಾ ಪರಿಕರಗಳಿಂದಾದಿಯಾಗಿ ಟ್ರೀಟ್‌ಮೆಂಟ್, ಕ್ವಾರಂಟೈನ್, ಸೀಲ್ಡೌನ್ ತನಕವೂ ಕೂಡ ಆಳುವ ರಾಜಕೀಯ ನಾಯಕರ ಪ್ರಭಾವ ಇದೆ ಎನ್ನುವುದು ಪದಶಃ ಸತ್ಯ.
ಮೃತರಾದವರ ಶವವನ್ನೇ ಬದಲು ಮಾಡಿ ಕಳುಹಿಸುವುದೆಂದರೇ ಏನು..? ಇದು ಬೇಜವಾಬ್ದಾರಿಯ ಪರಮಾವದಿ ಅಲ್ಲದೇ ಮತ್ತೇನಲ್ಲ. ಕೊರೋನಾ ನಿಯಂತ್ರಿಸುವಲ್ಲಿ ಎಲ್ಲಾ ಸೌಲಭ್ಯವಿದೆ, ಎಲ್ಲವನ್ನೂ ಮುತುವರ್ಜಿಯಿಂದ ಮಾಡ್ತಿದ್ದೇವೆ ಅಂತ ಪುಂಗಿ ಊದುತ್ತಿದ್ದ ಆಳುವವರು, ಜಿಲ್ಲಾಧಿಕಾರಿಗಳು, ವೈಧ್ಯಾಧಿಕಾರಿಗಳು ಯಾರದ್ದೋ ಶವದ ಬದಲಾಗಿ ಇನ್ಯಾರದ್ದೋ ಶವವನ್ನು ಕಳುಹಿಸಿಕೊಡುವಾಗ ಎಲ್ಲಿ ಹೋಗಿದ್ದಾರೆ..?
ಕೋವಿಡ್ ಹೆಸರಿನಲ್ಲಿ ಆಗುತ್ತಿರುವ ದಂಧೆ ಮತ್ತು ಅವ್ಯವಸ್ಥೆ ಈಗ ಬಟಾಬಯಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಯಿದ್ದರೂ ಒತ್ತಾಯ ಪೂರ್ವಕವಾಗಿ ಕೊರೋನಾ ಚಿಕಿತ್ಸೆ ಮಾಡಿ ಹಣ ಕೊಳ್ಳೆಹೊಡೆಯುತ್ತಿರುವ, ಸುಳ್ಳು ಸುಳ್ಳು ಟೆಸ್ಟಿಂಗ್ ರಿಪೋರ್ಟ್ ನೀಡಿ ಮಾಫಿಯಾ ನಡೆಸುತ್ತಿರುವ, ಹೆಣಗಳ ಮುಂದೆ ಕೋವಿಡ್ ಡ್ರಾಮ ಮಾಡುವ ಬಿಳಿಕೋಟಿನ ದಂಧೆಕೋರರ ಧೋರಣೆ ಇಡೀಯ ಸಾಮಾಜಿಕ ವಲಯವನ್ನೇ ಆತಂಕಕ್ಕೊಳಪಡಿಸಿದೆ.
ಅಮಾಯಕರ ಹೆಣ ಮುಂದಿಟ್ಟುಕೊಂಡು ಹೇಸಿಗೆ ತಿನ್ನುವ ಕೆಲಸಕ್ಕೆ ಖಾಸಗಿ ಆಸ್ಪತ್ರೆಗಳೊಂದಿಗೆ ಕೈ ಜೋಡಿಸಿರುವ ರಾಜಕೀಯ ನಾಯಕರಿಗೆ ಆರಿಸಿ ಕುರ್ಚಿ ಸಿಗುವಂತೆ ಮಾಡಿದವರೇ ಮುಂದಿನ ಸಾಲಿನಲ್ಲಿ ಸರಿಯಾದದ್ದನ್ನೇ ಪಾಠ ಕಲಿಸಬೇಕಿದೆ.
-ಶ್ರೀರಾಜ್ ವಕ್ವಾಡಿ









