Sunday, November 17, 2019

‘ಅರುಂಧತಿ ನಾಗ್’ ಜೊತೆ ರಂಗಾನುಭವ ಪಯಣ



                ಮರಾಠಿ ಮೂಲದ ಕನ್ನಡ ರಂಗಭೂಮಿ ಕಲಾವಿದೆ. ಮಾತ್ರವಲ್ಲ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರಲ್ಲೊಬ್ಬರು. ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರಾಂತಿ ತಂದ ನಿರ್ದೇಶಕ, ನಟ ಶಂಕರ್‌ನಾಗ್ ಅವರ ಪತ್ನಿ, ಪದ್ಮಶ್ರೀ ಪುರಸ್ಕೃತೆ ಡಾ. ಅರುಂಧತಿ ನಾಗ್. ಅವರ ಕಿರು ಸಂದರ್ಶನ, ನಿಮ್ಮ ಆತ್ಮ ದರ್ಶನಕ್ಕಾಗಿ.


                                                    
ರಂಗಭೂಮಿಯಲ್ಲಿ ಆಸಕ್ತಿ ಹೇಗೆ ಹುಟ್ಟಿತು..? ಮತ್ತು ಆರಂಭದ ರಂಗಭೂಮಿಯಲ್ಲಿನ ನೆನಪುಗಳನ್ನು ಹಂಚಿಕೊಳ್ಳುವುದಾದರೆ...
ರ0ಗಭೂಮಿ ಎಲ್ಲರ ಜೀವದಲ್ಲಿಯೂ ಇರುತ್ತದೆ. ಅಮ್ಮನ ಲಾಲಿತ್ಯ, ಅಮ್ಮ ಪ್ರೀತಿ, ವಾತ್ಸಲ್ಯ ಎಲ್ಲವೂ ನಾಟಕವೇ, ಅಭಿನಯವೇ..ಬಾಲ್ಯ ಜೀವನದಲ್ಲಿ ಅಂದರೆ ಡೆಲ್ಲಿಯಲ್ಲಿರುವಾಗ ಹಬ್ಬದ ಹರಿದಿನಗಳ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ರಾಮಲೀಲಾ ಹಬ್ಬದಲ್ಲಿ ಸ್ಥಳಿಯರೆಲ್ಲಾ ಕೂಡಿ ನಾಟಕಗಳನ್ನು ಮಾಡುತ್ತಿದ್ದರು, ಅದನ್ನು ಬಹಳ ಕುತೂಹಲನಾಗಿ ನೋಡುತ್ತಿದ್ದೆ, ಹೀಗೆ ನೋಡಿ ನೋಡಿ ಆಸಕ್ತಿ ಬೆಳೆಯಿತು. ಆಮೇಲೆ ಹೀಗೆ ಶಾಲೆಗಳಲ್ಲಿ, ನಾವಿದ್ದ ಸುತ್ತಮುತ್ತಲಲ್ಲಿ ಆಗಾಗ ಅವಕಾಶಗಳು ಸಿಕ್ಕಿತು, ಅದನ್ನು ಬಳಸಿಕೊಂಡೆ. ತದನಂತರ ನಾವು ಮುಂಬೈಗೆ ಬಂದೆವು, ಅಲ್ಲಿ ಕಾಲೇಜಿನಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡೆ. ಇಂಗ್ಲಿಷ್, ಮರಾಠಿ, ಹಿಂದಿ ನಾಟಕಗಳಲ್ಲಿ ಅಭಿನಯಿಸಿದೆ. ಪಾತ್ರದಲ್ಲಿ ನಾನು ನಾನಾಗಿರುತ್ತಿರಲಿಲ್ಲ. ಆ ಪಾತ್ರವಾಗಿಯೇ ಕಾಣಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದೆ. ಹೀಗೆ ನನ್ನ ರಂಗಭೂಮಿ ಆಸಕ್ತಿ, ರಂಗಭೂಮಿಯಲ್ಲಿನ ಆರಂಭದ ದಿನಗಳಿದ್ದವು.

ಕಾಲೇಜಿನ ದಿನಗಳಲ್ಲಿ ನಾಟಕ ಮಾಡುತ್ತಿರಬೇಕಾದರೆ, ನಿಮ್ಮ ಅಭಿರುಚಿಗೆ ಶಂಕರ್‌ನಾಗ್ ಜೊತೆಯಾಗುತ್ತಾರೆ. ನಂತರ ನಿಮಗೂ, ಕನ್ನಡಕ್ಕೂ ಒಂದು ನಂಟು ಅಲ್ಲಿಂದ ಶುರುವಾಗುತ್ತದೆ...
ನಾನು ಮತ್ತು ಶಂಕರ್ ಭೇಟಿಯಾಗಿದ್ದು ಕಾಲೇಜಿನ ದಿನಗಳಲ್ಲಿ. ನಾನು ಇಂಟರ್ ಕಾಲೇಜ್ ಡ್ರಾಮಾ ಕಾಂಪಿಟೇಶನ್‌ಗಳಲ್ಲಿ, ಯೂಥ್ ಫೆಸ್ಟ್ಗಳಲ್ಲಿ ಭಾಗವಹಿಸುತ್ತಿದ್ದೆ. ಆಗ ಶಂಕರ್ ಪರಿಚಯವೇ ಇದ್ದಿರಲಿಲ್ಲ. ಮುಖ ಪರಿಚಯವಿದ್ದರೂ ಮಾತಾಡಿ ಗೊತ್ತಿರಲಿಲ್ಲ. ಇಂಡಿಯನ್ ನ್ಯಾಶನಲ್ ಥೀಯೆಟರ್ ಅಂತ ಒಂದು ನಾಟಕ ತಂಡವಿದೆ. ಆ ತಂಡ ಕಾಲೇಜುಗಳ ಕಾಂಪಿಟೇಶನ್‌ಗಳಲ್ಲಿ ಉತ್ತಮ ಅಭಿನಯಿಸುವ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಒಂದು ನಾಟಕ ತಯಾರು ಮಾಡುತ್ತಿತ್ತು. ಅದರಲ್ಲಿ ನನಗೂ ಅವಕಾಶ ಸಿಕ್ಕಿತ್ತು. ಆ ನಾಟಕ ತಂಡ ಶಂಕರ್‌ನನ್ನು ಕೂಡ ಆಯ್ಕೆ ಮಾಡಿಕೊಂಡಿತ್ತು. ಆದರೇ ಗುಜರಾತಿ ನಾಟಕ ತಂಡವಾಗಿರುವುದರಿAದ ಗುಜರಾತಿ ನಾಟಕ ಮಾಡಿಸಿದ್ದರು. ನಮ್ಮಿಬ್ಬರಿಗೂ ಗುಜರಾತಿ ಗೊತ್ತಿರಲಿಲ್ಲ. ಆ ನಾಟಕದಿಂದ ನಾವು ಗುಜರಾತಿ ಕಲಿತುಕೊಂಡೆವು. ನಂತರ ನಮ್ಮಲ್ಲಿ ಸ್ನೇಹ ಬೆಳೆಯಿತು. ಅಭಿರುಚಿ ಒಂದಾಯ್ತು. ಸಿನೆಮಾಗಳಲ್ಲಿ ಹುಟ್ಟುವ ಹಾಗೆ ಪ್ರೀತಿ ನಮ್ಮದಾಗಿರಲಿಲ್ಲ. ಆಸಕ್ತಿಯೇ ನಮ್ಮನ್ನು ಜೊತೆಯಾಗಿಸಿತು.

ನೀವು, ಶಂಕರ್‌ನಾಗ್ ಜೊತೆಯಾಗಿ ಮತ್ತೆ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತೀರಿ. ಸಂಕೇತ್ ಎನ್ನುವ ತಂಡವನ್ನು ನೀವು ಮಾಡುತ್ತೀರಿ.. ಆ ಬಗ್ಗೆ ಹೇಳುವುದಾದರೆ...
ಶಂಕರ್ ಮುಂಬೈ ಬಿಟ್ಟಯ ಬಂದಾಗ ಇಲ್ಲಿ ಅಂದರೆ ಕರ್ನಾಟಕದಲ್ಲಿ ಸಿನೆಮಾಗಳನ್ನು ಮಾಡುತ್ತಿದ್ದ, ಕೆಲವು ವರ್ಷಗಳ ನಂತರ ಅವನಿಗೆ ಸಿನೆಮಾಗಳ ಜೊತೆಗೆ ನಾಟಕಗಳನ್ನೂ ಮಾಡಬೇಕು ಅನ್ನಿಸಿತು. ನನ್ನನ್ನೂ ಕೇಳಿಕೊಂಡ..ಲೈಕ್ ಪ್ಲೀಸ್ ಹೆಲ್ಪ್ ಮೀ ಟು ಸ್ಟರ‍್ಟ್ ಥೀಯೇಟರ್..ದೆನ್ ಐ ಸೆಡ್ ಒಕೆ. ಇಲ್ಲಿಗೆ ಬಂದೆ. ಅಂಜು ಮಲ್ಲಿಗೆ ನಾಟಕ ಮಾಡುವುದಕ್ಕೆ ಆರಂಭಿಸಿದ್ವಿ...ಅದರಲ್ಲಿ ಅನಂತ್ ನಾಗ್ ಸಹ ಇದ್ದ,  ನನಗೆ ಕನ್ನಡ ಬರುತ್ತಿರಲಿಲ್ಲ. ದೇವನಾಗರಿಯಲ್ಲಿ ಕನ್ನಡ ಬರೆದುಕೊಂಡು, ಬಾಯಿಪಾಠ ಮಾಡಿ ಮಾಡಿದ ಕನ್ನಡದ ಮೊದಲನೇ ನಾಟಕ ಅಂಜು ಮಲ್ಲಿಗೆ. ಆಮೇಲೆ  ಶಂಕರ್ ನನ್ನನ್ನು ಮದುವೆಯಾಗ್ತೀಯಾ ಅಂತ ಕೇಳಿಕೊಂಡ. ಇಬ್ಬರೂ ಒಪ್ಪಿ ಮದ್ವೇ ಆದೆವು. ಮತ್ತೆ ನಾಟಕಗಳಲ್ಲಿ ತೊಡಗಿಕೊಂಡವು. ಆದ್ರೆ ಮುಂಬೈಯಲ್ಲಿ ಮಾಡುತ್ತಿದ್ದಷ್ಟು ನಾಟಕಗಳನ್ನು ಮಾಡುವುದಕ್ಕೆ ಆಗಲಿಲ್ಲ, ಮತ್ತು ಅವಕಾಶಗಳೂ ಇಲ್ಲಿ ಸಿಗಲಿಲ್ಲ. ಶಂಕರ್‌ನ ಎಲ್ಲಾ ಕನಸುಗಳಿಗೆ ಜೊತೆಯಾದೆ.

ಶಂಕರ್ ಜೊತೆ ಸಿನೆಮಾಗಳಲ್ಲಿ ತೊಡಗಿಕೊಂಡ್ರಿ..ಆ ಬಗ್ಗೆ ಹೇಳುವುದಾದರೆ..
ನಿಜವಾಗಿ ಸಿನೆಮಾ ನನ್ನ ಮಾಧ್ಯಮ ಅಲ್ಲ, ನಾನು ರಂಗಭೂಮಿಯನ್ನು ಇಷ್ಟಪಡುವವಳು. ಶಂಕರ್ ಸಿನೆಮಾಗಳಲ್ಲಿ ಗಟ್ಟಿ ಇದ್ದ. ಅವನ ನಿರ್ದೇಶನ, ನಟನೆ ಅದ್ಭುತ. ಬಹಳವಾಗಿ ಸಿನೆಮಾವನ್ನು ಇಷ್ಟಪಡುತ್ತಿದ್ದ. ಅವನು ಕೇಳಿಕೊಂಡಿದ್ದಕ್ಕೆ ಕೆಲವು ಸಿನೆಮಾಗಳಲ್ಲಿ ನಟಿಸಿದೆ, ಕಾಸ್ಟೂö್ಯಮ್ ಡಿಸೈನ್ ಮಾಡಿದೆ, ಮಾಲ್ಗುಡಿ ಡೇಸ್ ಗೆ ಸಂಭಾಷಣೆ ಬರೆದುಕೊಟ್ಟೆ ಅಷ್ಟೇ.. ಸಿನೇಮಾಗಳಲ್ಲಿ ನನಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಶಂಕರ್ ಗೆ ಒಳ್ಳೆಯ ಗ್ರಿಪ್ ಇದ್ದಿತ್ತು. ಸಿನೆಮಾಗಳಲ್ಲಿ ಹೊಸತನ ತರುತ್ತಿದ್ದ, ಹಾಗಾಗಿ ಅವನ ಸಿನೆಮಾಗಳು ಇಂದಿಗೂ ಪ್ರಸ್ತತ. ಅದೆಲ್ಲದಕ್ಕಿಂತ ಹೆಚ್ಚು ಒಳ್ಳೆಯ ಮನಸ್ಸು ಆತನಿಗಿತ್ತು. ಆ ಒಳ್ಳೆಯತನ ಸಿನೆಮಾದಲ್ಲಿ ಶಂಕರ್‌ಗೆ ಒಳ್ಳೆಯ ಹೆಸರು ತಂದುಕೊಡ್ತು. ಸಿನೆಮಾಗಳಲ್ಲಿ ನನ್ನದೇನೂ ಇಲ್ಲ.

‘ರಂಗಶ0ಕರ’ದ ಮೂಲಕ ಶಂಕರ್ ನಾಗ್ ಅವರ ಕನಸನ್ನು ಈಡೇರಿಸಿದ್ದೀರಿ ನೀವು... ರಂಗಶ0ಕರ ಈಗ ಹೇಗೆ ಕಾರ್ಯ ನಿರ್ವಹಿಸುತ್ತಿದೆ.
ಶಂಕರ್ ಒಬ್ಬ ಒಳ್ಳೆಯ ಕನಸುಗಾರ. ಅವನ ಕನಸ್ಸನ್ನು ಸಣ್ಣರೂಪದಲ್ಲಿ ಸಾಕಾರಗೊಳಿಸುವುದಕ್ಕೆ ರಂಗಶ0ಕರದ ಮೂಲಕ ನಾನು ಪ್ರಯತ್ನಿಸಿದ್ದೇನಷ್ಟೆ. ಶಂಕರ್ ಇದ್ದಿದ್ದರೆ ಇದೇ ರಂಗಶ0ಕರವನ್ನೂ ಇನ್ನೂ ಚೆನ್ನಾಗಿ ಮಾಡುತ್ತಿದ್ದ. ನಾನು ಥೀಯೇಟರ್ ಫ್ರೇಂಡ್‌ನ್ನು ಕಳೆದುಕೊಂಡೆ, ನಾನು ನನ್ನ ಒಳ್ಳೆಯ ಫ್ರೆಂಡ್‌ನನ್ನು ಕಳೆದುಕೊಂಡೆ. ನಾನು ನನ್ನ ಗಂಡನನ್ನು ಕಳೆದುಕೊಂಡೆ. ಅವನಿಗೆ ಗೌರವಾರ್ಥವಾಗಿ ರಂಗಶ0ಕರವನ್ನು ನಿರ್ಮಿಸಿದೆ. ಅವನು ಇದ್ದಾಗಲೇ ಈ ಥೀಯೇಟರ್ ಮಾಡೋಣ ಅಂತ ಕನಸು ಕಂಡಿದ್ದು, ಆದರೆ ಅದಾಗಲಿಲ್ಲ. ಈಗ ರಂಗಶ0ಕರ ಬೆಳೆದು ನಿಂತಿದೆ. ರಂಗಶ0ಕರಕ್ಕೀಗ ಹದಿನೈದು ವರ್ಷಗಳಾಗಿದೆ..ಎಷ್ಟರ ಮಟ್ಟಿಗೆ ನಾಟಕಗಳಲ್ಲಿ ಹೊಸ ತಂತ್ರಗಳನ್ನು ಬಳಸಿಕೊಳ್ಳಬಹುದೋ ಅಷ್ಟರಮಟ್ಟಿಗೆ ನಾವು ರಂಗಶ0ಕರದಲ್ಲಿ ಪ್ರಯತ್ನಿಸುತ್ತಿದ್ದೇವೆ. ಮಾತ್ರವಲ್ಲ, ಬೇರೆ ಬೇರೆ ನಾಟಕ ತಂಡಗಳಿಗೂ ಕೂಡ ರಂಗಶ0ಕರ ವೇದಿಕೆ ಕೊಡುತ್ತಿದೆ.

ರಂಗಭೂಮಿ ಮತ್ತು ಸಿನೆಮಾಗಳಲ್ಲಿ ನೀವು ಕಂಡ0ತಹ ವ್ಯತ್ಯಾಸ..?
ತುಂಬಾ ವ್ಯತ್ಯಾಸಗಳಿವೆ, ಆದರೆ ಸಿನೆಮಾ ಮತ್ತು ನಾಟಕಗಳ ವಸ್ತು ಬೇರೆ ಬೇರೆ ಎಂದು ನಾನು ಹೇಳುವುದಿಲ್ಲ. ಅಭಿವ್ಯಕ್ತ ಪಡಿಸುವ ರೀತಿ ಬೇರೆ. ನಾಟಕಗಳಲ್ಲಿ ಒಬ್ಬ ಕಲಾವಿದ ಹೀರೋ ಆಗಬಹುದು, ಅವನು ಅವನ ಶೈಲಿಯಲ್ಲಿ ತನ್ನ ಪಾತ್ರವನ್ನು ನಿಭಾಯಿಸಬಹುದು. ಆದ್ರೇ ಸಿನೆಮಾಗಳಲ್ಲಿ ಹಾಗಲ್ಲ, ನಿರ್ದೇಶಕನೇ ಮುಖ್ಯ. ದಿ ವೆ ಹೀ ವಾಂಟ್ಸ್ ಟು ಶೋ ಈಸ್ ಇಂಪರ‍್ಟಾAಟ್. ನಾಟಕ ಮತ್ತು ಸಿನೆಮಾಗಳ ಉದ್ದೇಶ ಒಂದೇ. ನಾನೊಬ್ಬ ರಂಗಭೂಮಿ ಕಲಾವಿದೆಯಾಗಿ ಹೇಳುವುದಾದರೆ, ಸಿನೆಮಾಗಳಿಗಿಂತ ನಾಟಕಗಳಲ್ಲಿ ಹಲವು ಭಾವನೆಗಳಿವೆ, ಕಲ್ಪನೆಗಳಿವೆ. ನಾಟಕದ ಸಾಹಿತ್ಯ ಸಿನೆಮಾ ಸಾಹಿತ್ಯಕ್ಕಿಂತ ಗಟ್ಟಿಯಾದದ್ದು. ಆದರೆ ಸಿನೆಮಾ ಯಾವಾಗ ಬೇಕಾದರೂ ನೋಡಬಹುದು. ಆದರೇ ನಾಟಕ ಹಾಗಲ್ಲ, ಆ ಒಂದು ಪ್ರದರ್ಶನದಲ್ಲಿ ಮಾತ್ರ ನೋಡಬಹುದು. ಇವುಗಳು ಸಿನೆಮಾ ಮತ್ತು ನಾಟಕಗಳಲ್ಲಿನ ಮುಖ್ಯ ವ್ಯತ್ಯಾಸ. ಬಟ್ ಫಾರ್ ಮೀ ಥೀಯೇಟರ್ ಈಸ್ ದಿ ಬೆಸ್ಟ್.

ರಂಗಭೂಮಿಯಲ್ಲಿನ ನಿಮ್ಮ ಹೆಚ್ಚುಗಾರಿಕೆಯನ್ನು ಕಂಡು ೨೦೧೦ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟಿದೆ. ಆ ಖುಷಿಯನ್ನು ಹಂಚಿಕೊಳ್ಳುವುದಾದರೆ...
ಇಲ್ಲಾ.. ಪದ್ಮಶ್ರೀ ನನಗೆ ಸರ್ಕಾರ ಕೊಟ್ಟಿದ್ದು ಫಾರ್ ಮೈ ರ‍್ವಿಸ್ ಟು ಥೀಯೇಟರ್. ಅದು ರಂಗಶ0ಕರ ಕಟ್ಟಿರುವುದು ಮತ್ತು ನಾಟಕಗಳಿಗೆ ವೇದಿಕೆ ಕೊಟ್ಟಿದ್ದು. ಇ ಸ್ಟçಗಲ್ಡ್ ಅ ಲಾಟ್ ಅಂಡ್ ಇ ಬಿಲ್ಡ್ ದಾಟ್ ಥೀಯೇಟರ್. ರಂಗಶ0ಕರ ಮಾಡಿರುವುದು ನನ್ನ ಸಂಕೇತ ತಂಡಕ್ಕಾಗಿ ಅಲ್ಲವೇ ಅಲ್ಲ. ನಿಜವಾಗಿ ಹವ್ಯಾಸಿ ರಂಗಭೂಮಿ ತಂಡಗಳಿಗೆ ಕೊಟ್ಟಿರುವ ಕೊಡುಗೆ ಅದು. ಆ ನನ್ನ ಸೇವೆಗೋಸ್ಕರ ನನಗೆ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಕೊಟ್ಟಿದೆ. ನಾನು ಸಾಕಷ್ಟು ಅಭಿನಯಗಳನ್ನು ಮಾಡಿದ್ದೇನೆ. ಆದರೇ ಎಲ್ಲವೂ ಕಲಿತಿದ್ದೇನೆ ಅಂತ ಅಲ್ಲ. ಕಲಿಯುವುದು ತುಂಬಾ ಇದೆ.

ಮೇಡಂ, ನಿಮಗೆ ರಾಷ್ಟಿçಯ ಚಲನಚಿತ್ರ ಪ್ರಶಸ್ತಿಯನ್ನು ಒಳಗೊಂಡು ಸಾಕಷ್ಟು ಪ್ರಶಸ್ತಿಗಳು ಬಂದಿದೆ. ಈ ಬಾರಿಯ ಅಂದರೆ ಹದಿನೈದನೇ ಆಳ್ವಾಸ್ ನುಡಿಸಿರಿಯಲ್ಲಿ ‘ನುಡಿಸಿರಿ ಪ್ರಶಸ್ತಿ’ ನಿಮಗೆ ಬಂದಿದೆ..ಹೇಗನ್ನಿಸುತ್ತದೆ..?
ಪದ್ಮಶ್ರೀ ಸಿಗಬಹುದು, ರಾಷ್ಟಿçಯ ಚಲನಚಿತ್ರ ಪ್ರಶಸ್ತಿ ಬರಬಹುದು. ಆದರೇ ಎಲ್ಲರಿಗೂ ನುಡಿಸಿರಿ ಪ್ರಶಸ್ತಿ ಬರುವುದಿಲ್ಲ. ಒಂದು ಸಂಸ್ಥೆ ಇಷ್ಟು ದೊಡ್ಡ ಮಟ್ಟದಲ್ಲಿ ಒಂದು ಸಮ್ಮೇಳನವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿ ನಮ್ಮಂಥವರನ್ನು ಗುರುತಿಸಿ ‘ನುಡಿಸಿರಿ ಪ್ರಶಸ್ತಿ’ ನೀಡಿ ಗೌರವಿಸುತ್ತದೆ ಅಲ್ವಾ..? ಆಗಾ ತುಂಬಾ ತುಂಬಾ ಹೆಮ್ಮೆ ಅನ್ನಿಸುತ್ತದೆ. ಹುಟ್ಟಿದ್ದು ಡೆಲ್ಲಿ, ಬೆಳೆದಿದ್ದು ಮುಂಬೈಯಲ್ಲಿ...ಈಗ ಇರುವುದು ಕರ್ನಾಟಕದಲ್ಲಿ. ಎಲ್ಲೋ ಇದ್ದವಳು, ಇಲ್ಲಿಗೆ ಬಂದು ಇಂತಹ ದೊಡ್ಡ ಪ್ರಶಸ್ತಿ ಪಡೆಯುತ್ತಿರುವುದು ಬಹಳ ಖುಷಿಕೊಟ್ಟಿದೆ. ಆಳ್ವಾಸ್‌ನಂತಹ ದೊಡ್ಡ ಸಂಸ್ಥೆ ಇಂತಹ ಒಳ್ಳೆಯ ಕೆಲಸ ಮಾಡುತ್ತಿದೆ ಅಲ್ವಾ ಅದನ್ನು ಶ್ಲಾಘಿಸಲೇಬೇಕು.

ಕೊನೆಯದಾಗಿ...ನೀವೊಬ್ಬ ಹಿರಿಯ ರಂಗ ಕಲಾವಿದೆಯಾಗಿ ಮುಂದೆ ಬರುವ ಯುವ ಕಲಾವಿದರಿಗೆ ಏನು ಹೇಳುವುದಕ್ಕೆ ಇಷ್ಟಪಡ್ತೀರಿ..?
ಮೊದಲು... ‘ವಿನಯ’ ವಿನಯ ಇರಬೇಕು. ಸಾಮಾಜಿಕವಾಗಿ ಬದುಕುವುದೆಂದರೆ ಸಾಮಾನ್ಯ ಬದುಕಲ್ಲ ಅದು. ಜವಾಬ್ದಾರಿಯುತವಾದದ್ದು. ಪ್ರತಿಯೊಬ್ಬರಲ್ಲು ಕಲಿಯುವುದಿದೆ. ಕಲಿಯಬೇಕು. ಓದಬೇಕು. ರಂಗಭೂಮಿಗೆ, ಸಿನೆಮಾಗಳಿಗೆ ಕಾಲಿಡುವರಿಗೆ ದೊಡ್ಡ ಸಾಮಾಜಿಕ ಹೊಣೆ ಇದೆ. ಸಂಸ್ಕೃತಿ, ಕಲೆ, ಇತಿಹಾಸ, ರಾಜಕೀಯ ಎಲ್ಲದರ ಬಗ್ಗೆಯೂ ಜ್ಙಾನ ಸ್ವಲ್ಪವಾದರೂ ಇರಬೇಕು. ಏನಾದರೂ ಹೊಸತನವಿರಬೇಕು, ಏನಾದರೂ ಮಾಡುತ್ತಿರಬೇಕು. ಯಾರು ನಾನು..? ನಾನು ಹೇಗಿರಬೇಕು..?  ನಾನು ಏನಾಗಬೇಕು..? ಆ ಪ್ರಶ್ನೆ ನಿಮಗೆ ನೀವೇ ಕೇಳಿಕೊಳ್ಳಿ. ರಂಗಭೂಮಿಯಲ್ಲಿ ನೀವೊಬ್ಬ ಒಳ್ಳೆಯ ಕಲಾವಿದರಾಗಬಹುದು.
                                                                                              -ಶ್ರೀರಾಜ್ ಎಸ್. ಆಚಾರ್ಯ, ವಕ್ವಾಡಿ