ಕತ್ತಲೆ ಉಳಿದೆಲ್ಲವೂಗಳಿಗಿಂತ ಚುರುಕಾಗಿರುತ್ತದೆ. ಬಹುಬೇಗನೆ ಅದು ಆಕ್ರಮಿಸಿಕೊಳ್ಳುತ್ತದೆ. ಬೆಳಕು ಆರುವುದು ಮತ್ತು ಉರಿಯುವುದು ಕತ್ತಲೆಯಿಂದಲ್ಲ. ಬೆಳಕೆಂದರೇ ಏನೇನೋ ಅಲ್ಲ. ನಿನ್ನೊಳಗಿನ ಆಶಾಭಾವ.
ಕತ್ತಲೆ ನಮ್ಮನ್ನು ಸುತ್ತುವರಿಯಲೇ ಬೇಕು. ಅದು ಖಂಡಿತವಾಗಿ ನಮ್ಮನ್ನು ಒಂದೊಮ್ಮೆ ಸುತ್ತುವರಿವುತ್ತದೆ. ಆಗಲೇ ನಮ್ಮ ಕನಸು, ಗುರಿ ಪೂರ್ಣವಾಗಿ, ಸ್ಪಷ್ಟವಾಗಿ ನೆನಪಾಗುವುದು. ಕತ್ತಲೆ ನಮಗೆ ಒಂದು ಅನಾಮತ್ತಾದ ದಿಗಿಲು ಹುಟ್ಟಿಸಬಹುದು. ಆದರೇ, ಅದು ನಮ್ಮ ಬದುಕಿಗೆ ಪೂರ್ಣವಿರಾಮ ಇಡುವಂತೆ ಮಾಡುವುದಿಲ್ಲ.
ಯಾವ ಕಣ್ಣಿಗೂ ತೋರದೇ ಇರುವಷ್ಟು ಇಲ್ಲಿ ಕತ್ತಲೆ ಇಲ್ಲ. ಮತ್ತು ನಿನ್ನ ಒಳಮನಸ್ಸಿಗೆ ಗಾಯವಾಗುವಷ್ಟು ಕೂಡ ಕತ್ತಲೆ ಇಲ್ಲ. ಹಾಗೊಂದುವೇಳೆ ಇದ್ದಿತ್ತಾಗಿದ್ದರೇ, ಆ ಕತ್ತಲೆಯನ್ನು ದಾಟಿ ಬಂದವರು ‘ಆ ಕತ್ತಲೆಯ ದಿನಗಳು ಒಂದಿಷ್ಟು ಬುದ್ದಿ, ಪಾಠ ತಿಳಿಸಿಕೊಟ್ಟಿತು’ ಅಂತ ಹೇಳುವುದಕ್ಕೆ ಸಾಧ್ಯವೇ ಇಲ್ಲ.
ನೀವು ನಂಬುವುದಾದರೇ ನಂಬಿ. ಇಲ್ಲವಾದರೇ ಬಿಡಿ. ಕತ್ತಲೆ ನಿಮ್ಮನ್ನು ಒಳ್ಳೆಯ ದಾರಿಯತ್ತ ಸಾಗುವಂತೆ ಮಾಡುವಷ್ಟು ಬೆಳಕು ಕೂಡ ಮಾಡುವುದಿಲ್ಲ. ‘ಕತ್ತಲೆ’ ಆ ಕ್ಷಣಕ್ಕೆ ಅಹಿತವಾದರೂ, ಮುಂದೊಂದು ದಿನ ‘ಹಾಗಾಗಿದ್ದರಿಂದಲೇ ಒಳ್ಳೆಯದಾಯಿತು’ ಅಂತ ನೀವು ಹೇಳಿಯೇ ಹೇಳುತ್ತೀರಿ. ಅದೇ ಕತ್ತಲೆಯ ವಿಶೇಷ.
ಕತ್ತಲಿರುವಾಗ ಅದರ ಧ್ವನಿ ಕೇಳಿಸುವುದಿಲ್ಲ, ಅದರ ಆಳ, ವಿಸ್ತಾರ ಕಾಣಿಸುವುದಿಲ್ಲ. ಅದರ ಆಯಸ್ಸು ತೀರಿದ ಮೇಲೆ ಬೆಳಕು ಹರಿಯುವ ಹೊತ್ತಿಗೆ ಎಲ್ಲವೂ ಕಾಣಿಸುತ್ತವೆ, ಕೇಳಿಸುತ್ತವೆ. ಅದೆಷ್ಟು ರಣಭೀಕರ ಎಂಬುವುದು ನಿಮಗೆ ಅರಿವಾಗುತ್ತದೆ. ಅದನ್ನು ಮೀರಿದ ಮೇಲೆ ನೀವು ಈಗ ಹೇಳಿ, ನೀವು ಗ್ರೇಟ್ ಹೌದೋ ಅಲ್ವೋ..?
ಇಲ್ಲಿ, ಸಹಜತೆಯೇ ಅಸಹಜತೆ ಅನ್ನಿಸಿಕೊಳ್ಳುತ್ತದೆ. ಕತ್ತಲು ಆಕ್ರಮಿಸಿಕೊಳ್ಳುವುದು ಸಹಜವೇ ಹೊರತು, ಅಸಹಜ ಅಲ್ಲ. ಕವಿದ ಮೋಡ ಚಂದ್ರನ ಬೆಳಕಿಗೆ ಕರಗದೇ ಇರುವುದಿಲ್ಲ. ಇಲ್ಲಿ ಚಂದ್ರ ಇನ್ನ್ಯಾರೋ ಅಲ್ಲ, ನೀವೆ.
-ಶ್ರೀರಾಜ್ ವಕ್ವಾಡಿ

Spr shreeraj
ReplyDeleteThank You
Delete