ಬಹುಶಃ ಎಲ್ಲರ ಪಾಲಿಗೆ ಒಂಟಿತನ ಎನ್ನುವುದು ಭರಿಸಲಾಗದ ಶಿಕ್ಷೆ. ಆಂತರ್ಯವನ್ನು ಪ್ರೀತಿಸಿದ ಪ್ರೇಮಕ್ಕೆ ಪರ್ಯಾಯ ಅನ್ನುವುದೇ ಇಲ್ಲ. ಹಾಗಾಗಿ ಅಂತಹ ಪ್ರೀತಿ ದೂರವಾದರೂ ಹತ್ತಿರವಾಗುತ್ತದೆ. ಮತ್ತೆ ಮತ್ತೆ ಚಿಗುರಲೆತ್ನಿಸುತ್ತದೆ. ಆದರೇ, ಕೊನೆಯಲ್ಲಿ ಯಾವುದೋ ಅಮೂರ್ತ ಕಾರಣಕ್ಕೆ ಮತ್ತೆ ಸೋಲೊಪ್ಪುತ್ತದೆ.
ಅದು ನಮ್ಮೊಳಗಿನ ಮನೋಧೋರಣೆಯನ್ನು ಬಹಿರಂಗಪಡಿಸುತ್ತದೆ. ಎಲ್ಲವನ್ನೂ ಸ್ವೀಕರಿಸಿ ಸಹಿಸಿಕೊಳ್ಳುತ್ತದೆ. ನೋವು ಎಷ್ಟು ಅಗಾಧತೆಯನ್ನು ಕಂಡುಕೊಂಡಿರುತ್ತದೋ ಅಷ್ಟೇ ಮಮತೆ ದಟ್ಟವಾಗಿರುತ್ತದೆ.
ದೂರವಾದ ಪ್ರೀತಿ ಮತ್ತಷ್ಟು ವ್ಯಕ್ತಿತ್ವಕ್ಕೆ ಮತ್ತಷ್ಟು ಗಟ್ಟಿತನವನ್ನುಂಟು ಮಾಡುತ್ತದೆ. ನಿಜವಾಗಿಯೂ ಅದು ಅನೇಕ ಕೋನಗಳ ಆಳದಲ್ಲಿ ಬೇರೂರಿ ನಿಲ್ಲುತ್ತದೆ. ಎಲ್ಲವೂ ನಿಜ. ಆದರೇ,
ಕೆಲವೊಂದಿಷ್ಟು ಕಾಲ ಹಿತವುಣಿಸುತ್ತದೆ. ಕೆಲವೊಂದಿಷ್ಟು ಕಾಲ ದುಃಖವನ್ನು ಮೊಗೆಮೊಗೆದು ಕೊಡುತ್ತದೆ. ಇದು ಲೋಕ ನೀತಿ ಹಿತಕ್ಕೆ ಹಿಗ್ಗದೆ, ದುಃಖಕ್ಕೆ ಕುಗ್ಗದೇ ಬಾಳ್ವೆ ಕಂಡುಕೊಳ್ಳಬೇಕು ಅಷ್ಟೇ.
ಆದರೇ, ‘ಪ್ರೀತಿ’ ಬೇಡವೆಂದರೂ ಹಿಗ್ಗಿಸುತ್ತದೆ, ಕುಗ್ಗಿಸುತ್ತದೆ.
ಅದೆಷ್ಟು ಅಹಿತಕರ ನೆನಪು ಎನ್ನುವುದು ನನಗೆ ಮಾತ್ರವಲ್ಲ, ಆತನಿಗೂ ಗೊತ್ತು. ಜೋರಾದ ಒಂದು ಮಳೆ ಬಂದು ಬಿಡಲಿ. ಆತನ ಸ್ಪರ್ಶವಿರುವ ನೆನಪುಗಳೆಲ್ಲಾ ಕೊಚ್ಚಿಹೋಗಲಿ ಅಂತನ್ನಿಸುತ್ತದೆ. ಮತ್ತೊಮ್ಮೊಮ್ಮೆ, ಅದೇ ನೆನಪುಗಳು ಯಾಕೋ ಏನೋ ಸೋಜಿಗ ಅನ್ನಿಸುತ್ತೆ. ಹ್ಹು, ನೆನಪಿಗೆ ಸಾವಿಲ್ಲ ಎನ್ನುವುದು ಆತ ಎದೆಯೊಳಗೆ ಕಾಲಿಟ್ಟ ಮೇಲೆಯೇ ಗೊತ್ತಾಗಿದ್ದು. ದೂರವಿದ್ದಾನೆ. ತೋರಿಸಿಕೊಳ್ಳಲಾಗದ ಅದೇ ಉತ್ಕಟ ಪ್ರೀತಿಯೊಂದಿಗೆ. ನಾನೂ ಕೂಡ.
ಹ್ಹೇ... ಹೋಗೋ ದೂರ. ದೂರವಾದ ಮೇಲೆ ಮತ್ಯಾಕೆ ಹತ್ತಿರಕ್ಕೆ..? !
‘ಥ್ಯಾಂಕ್ಸ್’
ನೀನಂದರೇ, ದೂರವಾದಷ್ಟು ಹತ್ತಿರ..!
---------------------
-ಶ್ರೀರಾಜ್ ವಕ್ವಾಡಿ

ತುಂಬಾ ಚೆನ್ನಾಗಿದೆ
ReplyDeleteಥ್ಯಾಂಕ್ಯೂ ವಿಶಾಲ
Deletevery nice
ReplyDeleteThank You so much
DeleteThank You
ReplyDelete