Monday, April 6, 2020

ಭಾಜಪ ಸಂಸ್ಥಾಪನಾ ದಿನಾಚರಣೆ | ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ಸಂದೇಶ



ಬಿಜೆಪಿ ಪಕ್ಷದ 4೦ನೇ  ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಕೊವಿಡ್-19 ಸೋಂಕು ದಿನದಿಂದ ದಿನಕ್ಕೆ ಹರಡುವಿಕೆಯ ಪ್ರಮಾಣ ಹೆಚ್ಚುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ದೇಶ ಸಂಕಷ್ಟದಿಂದಿದೆ.  ಕೋವಿಡ್-19 ಯುದ್ಧದಲ್ಲಿ ದೇಶ ಗೆಲ್ಲಬೇಕು. ಆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದಿದ್ದಾರೆ. ಎಂತಹ ಸಂದರ್ಭದಲ್ಲಿಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮೋದಿ ಮನವಿ ಮಾಡಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ, ಬಿಜೆಪಿಗೆ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ದೇಶ ಸೇವೆ ಮಾಡುವುದಕ್ಕೆ ಅವಕಾಶ ಸಿಕ್ಕಿದೆ. ಎಲ್ಲರೂ ಒಂದಾಗಿ ದೇಶ ಸೇವೆ ಮಾಡೋಣ ಎಂದು ಅವರು ಕರೆ ಕೊಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೊರೋನಾ ವೈರಸ್ ತಡೆಗಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡ ನಿರ್ಣಯಕ್ಕೆ ಪ್ರಶಂಸಿಸಿದೆ. ಈ ವೈರಸ್ಸ್ ತಡೆಗಟ್ಟುವ ಪ್ರಯತ್ನಕ್ಕೆ ಇಡೀ ದೇಶ ಒಗ್ಗೂಡಿದೆ. ಭಾರತದ ಪ್ರಯತ್ನವನ್ನು ವಿದೇಶಗಳೂ ಮೆಚ್ಚಿವೆ. ಲಾಕ್ಡೌನ್ ಅನಿವಾರ್ಯ, ಇದೊಂದು ದೀರ್ಘ ಕಾಲದ ಹೋರಾಟ. ಯಾವುದೇ ರೀತಿಯಲ್ಲಿ ಕುಗ್ಗದೆ ಇದನ್ನು ಎದುರಿಸಬೇಕಾಗಿದೆ. ಕೊರೋನಾ ವೈರಸ್ ತಡೆಗಟ್ಟಲು ಎಲ್ಲಾ ದೇಶಗಳು ಒಗ್ಗೂಡಿ ಹೋರಾಡಬೇಕು ಎಂದು ಇದೇ ಸಂದರ್ಭ ಅವರು ಅಭಿಪ್ರಾಯ ಪಟ್ಟರು.

ಕಾರ್ಯಕರ್ತರಿಗೆ ಮೋದಿ ಹೇಳಿದ ಐದು ಸಂದೇಶ ಏನು..?
ದೇಶದಲ್ಲಿರುವ ಬಡವರಿಗೆ, ನಿರ್ಗತಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು. ಅವರ‍್ಯಾರೂ ಹಸಿವಿನಿಂದ ಬಳಲಬಾರದು. ಪಕ್ಷದ ಕಾರ್ಯಕರ್ತರು ಬಡ ಜನರಿಗೆ ಪಡಿತರ ತಲುಪಿಸುವ ಕಾರ್ಯವನ್ನು ಮಾಡಬೇಕು.
ನೀವು ಮಾಸ್ಕ್ ಧರಿಸಿ. ಸಾರ್ವಜನಿಕರಲ್ಲೂ ಆ ಬಗ್ಗೆ ಜಾಗೃತಿ ಹೇಳಬೇಕು. ಮಾಸ್ಕ್ ಅಗತ್ಯವಿರುವವರಿಗೆ ಮಾಸ್ಕ್ ವಿತರಿಸಿ. ಅನಗತ್ಯವಾಗಿ ಹಾಗೂ ಮಾಸ್ಕ್ ಧರಿಸದೇ ಮನೆಯಿಂದ ಹೊರಗೆ ಬರಬೇಡಿ.
ಪಕ್ಷದ ಕಾರ್ಯಕರ್ತರೆಲ್ಲರೂ ಕೊರೋನಾ ಮಾಹಿತಿ ಒದಗಿಸುವ ಆರೋಗ್ಯ ಸೇತು ಮೊಬೈಲ್ ಆ್ಯಪ್‌ನ್ನು ತಮ್ಮ ಮೊಬೈಲ್‌ಗೆ ಅಳವಡಿಸಿಕೊಳ್ಳಬೇಕು.
ಕೊರೋನಾ ವಿರುದ್ಧ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯರು, ಪೋಲೀಸರು, ಪೌರಕಾರ್ಮಿಕರು, ಅಧಿಕಾರಿಗಳು, ಮಾಧ್ಯಮದವರಿಗೆ ಹಾಗೂ ಅಗತ್ಯತೆಗಳನ್ನು ಒದಗಿಸುತ್ತಿರುವವರಿಗೆ ಕೃತಜ್ಞತಾ ಪತ್ರ ಸಲ್ಲಿಸುವುದು.
ಕೋರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಪ್ರಧಾನ ಮಂತ್ರಿ ಕೇರ್ ನಿಧಿಗೆ ಧನ ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಬೇಕು. ಪಕ್ಷದ ಕಾರ್ಯಕರ್ತರೆಲ್ಲರೂ ತಮ್ಮ ಸಾಮರ್ಥ್ಯಕ್ಕಾಗುವಷ್ಟರ ಮಟ್ಟಿಗೆ ಸಹಾಯಧನ ನೀಡವುದರೊಂದಿಗೆ ಪ್ರತಿಯೊಬ್ಬ ಕಾರ್ಯಕರ್ತನೂ ತಲಾ ನಲವತ್ತು ಜನರಿಂದ ಸಹಾಧನ ಕೂಡಿಸಬೇಕು.


ಸಾಕ್ಷಿಯೋ, ಪ್ರಶ್ನೆಯೋ, ವಿರೋಧವೋ.. ನಿಮ್ಮ ನಿಮ್ಮ ಭಾವಕ್ಕೆ..!
ಕೆಲವರು, ಭಾರತೀಯ ಜನತಾ ಪಕ್ಷ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೆಲವು ಕಡೆ ಪಕ್ಷದ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆ ಮಾಡಿಕೊಂಡಿದ್ದಾರೆ, ಇವರಿಗೆ ನಿಯಮಗಳು ಅನ್ವಯವಾಗುವುದಿಲ್ಲವೇ..? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಸ್ ಅಪ್ಲೋಡ್ ಮಾಡಿ ಪ್ರಶ್ನಿಸಿದ್ದಾರೆ. ಇನ್ನು ಕೆಲವರು ವೈದ್ಯಕೀಯ ಸಿಬ್ದಂಧಿಗಳಿಗೆ ಬೇಕಾದ 'ಪಿಪಿಇ'ಯ ಅಗತ್ಯದ ಬಗೆಗಿನ ಹಾಗೂ ಪ್ರಧಾನ ಮಂತ್ರಿ ಕೇರ್ ನಿಧಿಯ ಬಗೆಗಿನ ಕಾರ್ಟೂನುಗಳನ್ನು ತಮ್ಮ ಸೊಶೀಯಲ್ ಮೀಡಿಯಾಗಳ ವಾಲ್‌ಗೆ ಹಾಕಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.







---------------------------------------------------


-ಶ್ರೀರಾಜ್ ವಕ್ವಾಡಿ

No comments:

Post a Comment