Thursday, April 2, 2020

ರಾಮ...ಅಪರಾಧಂ ಕ್ಷಮಸ್ವಾ..!


ನಿನ್ನನ್ನು ದೈವತ್ವಕ್ಕೇರಿಸಿದರು,
ಪೂಜಿಸಿದರು...ಹಾಡಿದರು
ಹೊಗಳಿ ಕೊಂಡಾಡಿದರು...

ನಿನ್ನ ಛಾತಿ,
ಬದುಕು, ನಡೆ
ಎಮಗೆ ತಪವಾಗಲಿ  ರಾಮ..!

ರಾಮ್ ರಾಮ್ ಜೈಶ್ರೀರಾಮ್ 
ರಾಮ್ ರಾಮ್ ಸೀತಾರಾಮ್

ಧಿಟ ನಿಲುವು, 
ದೃಢ ಸಂಕಲ್ಪಕ್ಕೆ 
ನೀನಲ್ಲದೇ ಮತ್ಯಾರೋ..!? 

ರಾಮ..‌.
ನೀ ನೋಡುತ್ತಿರಬಹುದು.
ನಿನಗೀಗ ರಾಜಕೀಯ ಅಂಟಿಸಿದ್ದಾರೆ..!
ಶುಭಪ್ರದವೇ..!?
ನನಗಿದೋ,
ಸುತರಾಂ 
ಒಪ್ಪಲಸಾಧ್ಯ.
ನಿನಗೂ...!

ನಿನ್ನ ನೆಲಕ್ಕಂಟಿದ 
ಅಮಾಯಕರ ರಕ್ತವನ್ನು 
ನೋಡುತ್ತಿದ್ದೇನೆ,
ಭ್ರಷ್ಟತೆಯನ್ನು 
ಸಹಿಸಿಕೊಳ್ಳುತ್ತಿದ್ದೇನೆ,
ಗಲಭೆ, ಭಯೋತ್ಪಾದನೆಗಳಿಗೆ 
ಬೆದರಿ ನಿನ್ನ ನಾಮವ 
ಜಪಿಸುತ್ತಿದ್ದೇನೆ.
ಸಹಿಸುವಿಕೆಗೂ ಮಿತಿಯಿದೆ..!
ರಾಮ... 
ಇನ್ನೇನೂ ತೋಚುತ್ತಿಲ್ಲ...
ನಿನ್ನ ನಡೆ ಎಲ್ಲರಿಗೊಲಿಯಲಿ.
ಅಪರಾಧಂ ಕ್ಷಮಸ್ವಾ...!
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)

ರಾಮ ನವಮಿಯ ಶುಭಾಶಯಗಳು

No comments:

Post a Comment