೨೦೦೮ ಹಾಗೂ ೨೦೧೧ರಲ್ಲಿ ಕೊರಸಲಾಸ್ ಅಮಲಾಪುರಮ್, ಆಂದ್ರಪ್ರದೇಶ ಆಯೋಜಿಸಿದ ರಾಷ್ಟçಮಟ್ಟದ ‘ಆರ್ಟ್ ವಿಲೇಜ್’, ‘ವಂಡರ್ ಆರ್ಟ್ ವರ್ಲ್ಡ್ ಇಂಟರ್‌ನ್ಯಾಶನಲ್’ ಚಿತ್ರಸ್ಪರ್ಧೆಯಲ್ಲಿ ‘ಬಾಲಮಿತ್ರ ಅವಾರ್ಡ್’, ‘ಬಾಲ ಚಿತ್ರರತ್ನ’ ಅವಾರ್ಡ್ ಪಡೆದಿರುತ್ತಾರೆ. ಕುಂದಾಪುರದ ಪ್ರಸಿದ್ಧ ಕಾರ್ಟೂನ್ ಚಿತ್ರಗಾರ ಸತೀಶ್ ಆಚಾರ್ಯ ಆಯೋಜನೆಯಲ್ಲಿ ಖ್ಯಾತಿ ಗಳಿಸಿದ ‘ಕಾರ್ಟೂನ್ ಹಬ್ಬ’ದ ಕಾರ್ಟೂನು ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಸತತ ಎರಡು ಭಾರಿ ಪ್ರಥಮ. ಎರಡು ಭಾರಿ ದ್ವಿತೀಯ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಿದ್ದಲ್ಲದೇ, ಮಂಗಳೂರು ಯೂನಿವರ್ಸಿಟಿ ಆಯೋಜನೆಯ ಇಂಟರ್ ಕಾಲೇಜು ‘ಚಿತ್ತಾರ ೨೦೧೯’ರ ಕಾರ್ಟೂನು ಚಿತ್ರ ಸ್ಪರ್ಧೆಯಲ್ಲಿ ದ್ವಿತಿಯ ಬಹುಮಾನ ಪಡೆದಿದ್ದಾರೆ. ಹೀಗೆ.. ಹತ್ತು ಹಲವು ಸಂಸ್ಥೆಗಳು ಆಯೋಜಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ಪ್ರಸ್ತುತ ಕುಂದಾಪುರದ ಭಂಡಾರ್‌ಕರ‍್ಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ಸುಜಾತ, ಚಿತ್ರಕಲೆಯಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಆಸೆಯೊಂದಿಗೆ ಫ್ಯಾಶನ್ ಡಿಸೈನ್‌ನಲ್ಲಿಯೂ ಆಸಕ್ತಿ ತೋರಿಸಿ, ಈ ಭಾಗದ ಬಹುದೊಡ್ಡ ಭರವಸೆಯಾಗಿ ಕಾಣಿಸುತ್ತಿದ್ದಾರೆ ಎನ್ನುವುದು ಕೇವಲ ಬಣ್ಣದ ಮಾತಿನ ಉತ್ಪ್ರೇಕ್ಷೆಯಲ್ಲ. ಅವರ ಎಲ್ಲಾ ಕನಸುಗಳು ನನಸಾಗಲಿ, ಪ್ರತಿಭೆ ಜಗದಗಲ ವಿಸ್ತರಿಸಲಿ, ಊರಿಗೆ, ಹೆತ್ತವರಿಗೆ, ಬಂಧು ಬಳಗದವರಿಗೆಲ್ಲರಿಗೂ ಕೀರ್ತಿ ತಂದು ಕೊಡುವ ಶಕ್ತಿ ದೇವರು ಒದಗಿಸಿಕೊಡಲಿ ಎನ್ನುವುದು ತುಂಬು ಮನಸ್ಸಿನ ಪ್ರೀತಿ, ಹರಕೆ, ಹಾರೈಕೆ, ಸದಾಶಯ.
-ಶ್ರೀರಾಜ್ ಎಸ್. ಆಚಾರ್ಯ, ವಕ್ವಾಡಿ




No comments:
Post a Comment