೨೦೧೯ ರ ಅವಧಿ ಮುಗಿದು ೨೦೨೦ ಬಂದಿದೆ. ೨೦೧೯ರಲ್ಲಿ ಸಂಭವಿಸಿದ ಬಹುಮುಖ್ಯದಲ್ಲಿ ಮುಖ್ಯ ಘಟನೆಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ಸಣ್ಣ ಪ್ರಯತ್ನವಿದು.
ಜನವರಿ ೧ : ಶರಿಮಲೆಗೆ ಸ್ತ್ರೀ ಪ್ರವೇಶ : ಸ್ಥಿತಿ ಉದ್ವಿಗ್ನ
ಕೇರಳದ ಪುರಾಣ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ೧೦ ರಿಂದ ೫೦ ವರ್ಷದೊಳಗಿನ ಮಹಿಳೆಯರು ಪ್ರವೇಶಿಸುವಂತಿಲ್ಲ ಎಂಬ ಆಚರಣೆ ಸುಮಾರು ೮೦೦ ವರ್ಷಗಳಿಂದ ನಡೆದುಕೊಂಡು ಬಂದಿದ್ದು. ಈ ಸಂಪ್ರದಾಯವನ್ನು ಕನಕದುರ್ಗಾ(೪೨), ಬಿಂದು(೪೨) ಉಲ್ಲಂಘಿಸಿ ಪ್ರವೇಶಿಸಿದರು. ಈ ಘಟನೆ ಹಲವು ಚರ್ವಿತಚರ್ವಣಕ್ಕೆ ಎಡೆಮಾಡಕೊಟ್ಟಿತು.
ಜನವರಿ ೨ : ವಿಜಯ ಬ್ಯಾಂಕ್ ವಿಲೀನ
ದೇನಾ ಬ್ಯಾಂಕ್ ಹಾಗೂ ವಿಜಯಾಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೋಳಿಸುವ ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ. ಕರಾವಳಿಯಲ್ಲಿ ಈ ನಿರ್ಧಾರದ ವಿರುದ್ದ ಭಾರಿ ಆಕ್ರೋಶ, ಪ್ರತಿಭಟನೆ ನಡೆಯಿತು.
ಜನವರಿ ೪ : ಬೆಂಗಳೂರು ಬುಲ್ಸ್ಗೆ ಪ್ರೋ ಕಬ್ಬಡಿ ಟ್ರೋಫಿ
ಮುಂಬೈಯಲ್ಲಿ ನಡೆದ ಪ್ರೋ ಕಬ್ಬಡಿ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ಧ ೩೮-೩೩ ಸರಾಸರಿಯಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಜನವರಿ ೫ : ಮಲ್ಯಗೆ ‘ದೇಶಭ್ರಷ್ಟ ಆರ್ಥಿಕ ಅಪರಾಧಿ’ ಪಟ್ಟ
ದೇಶಭ್ರಷ್ಟ ಆರ್ಥಿಕ ಅಪರಾಧ(ಎಫ್‌ಇಒ) ಕಾನೂನಿನ್ವಯ ಮೊಟ್ಟಮೊದಲ ಬಾರಿಗೆ ಉದ್ಯಮಿ ವಿಜಯ್ ಮಲ್ಯರನ್ನು ಅಕ್ರಮ ಹನ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲೆ) ಪ್ರಕರಣಗಳ ಕೋರ್ಟ್ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿತು.
ಜನವರಿ ೬ : ಸುವರ್ಣ ತ್ರಿಭುಜ ಬೋಟ್ ನಾಪತ್ತೆ : ಮೀನುಗಾರರ ಪ್ರತಿಭಟನೆ
ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಕಾಣೆಯಾಗಿದ್ದ ಏಳು ಮಂದಿ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್‌ನ ಸುಳಿವು ೨೩ ದಿನಗಳಾದರೂ ಸಿಕ್ಕಿಲ್ಲ ಎಂಬ ಕಾರಣಕ್ಕೆ ರಾಜ್ಯ ಸಕಾರದ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಮೀನುಗಾರರು ಮಲ್ಪೆ ಮೀನುಗಾರ ಸಂಘಟನೆ ಕೈಗೊಂಡ ನಿರ್ಧಾರದಂತೆ ಮೀನುಗಾರಿಕೆಗೆ ರಜೆ ಘೋಷಿಸಿ ಬೃಹತ್ ಕಾಲ್ನಡಿಗೆ ಜಾಥ ಮತ್ತು ಪ್ರತಿಭಟನೆ ನಡೆಸಲಾಯಿತು.
ಜನವರಿ ೮ : ಮೀಸಲಾತಿ ಮಸೂದೆಗೆ ಲೋಕಸಭೆ ಗ್ರೀನ್ ಸಿಗ್ನಲ್
ಮೋದಿಯವರ ಮಾಸ್ಟರ್ ಸ್ಟ್ರೋಕ್ ಎಂದೇ ಬಿಂಬಿಸಲಾಗುತ್ತಿರುವ ಸಾಮನ್ಯ ವರ್ಗ, ಬಡವರ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಶೇ ೧೦ ರಷ್ಟು ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕಾರಗೊಳಿಸಲಾಯಿತು. ಈ ಮಸೂದೆಗೆ ಲೋಕಸಭೆಯಲ್ಲಿ ೩೨೩ ಮತಗಳು ಪರವಾಗಿದ್ದವು, ವಿರುದ್ಧವಾಗಿ ೩ ಮೂರು ಮತಗಳು ದಾಖಲಾದವು.
ಜನವರಿ ೧೦ : ಶಿಕ್ಷಕರ ವರ್ಗಾವಣೆ ಕಾಯ್ದೆ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ
ಶಿಕ್ಷಕರ ವರ್ಗಾವಣೆಯಲ್ಲಿ ಹಲವು ಗೊಂದಲಗಳಿರುವುದರಿಂದಾಗಿ ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಕೆಲವು ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಶಿಕ್ಷಕರು ಅಥವಾ ಅವರ ಕುಟುಂಬದವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ವಾಸಿಸುತ್ತಿರುವ ಸ್ಥಳದಲ್ಲಿ ಸರಿಯಾದ ಚಿಕಿತ್ಸೆ ಪಡೆಯಲು ಅಸಾಧ್ಯವಾದಲ್ಲಿ, ಬುದ್ದಿಮಾಂದ್ಯ ಮಕ್ಕಳನ್ನು ಹೊಂದಿದ್ದರೆ, ವರ್ಗಾವಣೆ ಬಯಸಿದರೆ ೫ ವರ್ಷದಿಂದ ೩ ವರ್ಷಕ್ಕೆ ಅವಕಾಶ ಕಲ್ಪಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿತು.
ಜನವರಿ ೧೫ : ಭೂಗತ ಪಾತಕಿ ದಾವೂದ್‌ನ ಆಪ್ತ ಫಾರೂಕ್ ಹತ್ಯೆ.
ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ತಂಡದ ಮತ್ತೊಬ್ಬ ದಾವೂದ್ ಎಂದೇ ಕರೆಯಲ್ಪಟ್ಟಿದ್ದ ಫಾರೂಕ್ ದೇವ್ಡಿವಾಲಾ(೪೧)ನನ್ನು ಪಾಕಿಸ್ಥಾನದ ಕರಾಚಿಯಲ್ಲಿ ದಾವೂದ್‌ನ ವಿರುದ್ಧವೇ ಸಂಚೂ ಹೂಡಿದ್ದಾನೆ ಎಂಬ ಕಾರಣಕ್ಕಾಗಿ ದಾವೂದ್‌ನ ಸಹಚರರೇ ಗುಂಡಿಕ್ಕಿ ಕೊಂದರು. ಛೋಟಾ ಶಕೀಲ್‌ನ ಸೂಚನೆಯಂತೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.
ಜನವರಿ ೧೭ : ಕುಂದಾಪುರ ಎಸಿ ಭೂಬಾಲನ್ ವರ್ಗ
ಒಂದು ವರ್ಷದಿಂದ ಕುಂದಾಪುರ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಟಿ. ಭೂಬಾಲನ್ ತುಮುಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ವರ್ಗ ಮಾಡಲಾಯ್ತು. ಅವರಿಂದ ತೆರವಾದ ಸ್ಥಾನಕ್ಕೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣಾಪ್ರಭಾ ಅವರನ್ನು ಪ್ರಭಾರ ಆಯುಕ್ತರಾಗಿ ನಿಯುಕ್ತಿಗೊಳಿಸಲಾಯಿತು.
ಜನವರಿ ೨೨ : ತ್ರಿವಿಧ ದಾಸೋಹಿ ಲಿಂಗೈಕ್ಯ
ಕಾಯಕ ಯೋಗಿ, ನಡೆದಾಡುವ ದೇವರು, ಲಕ್ಷೋಪಲಕ್ಷ ಜನರ ಹಸಿವು, ಜ್ಞಾನ ದಾಹ ನೀಗಿಸಿ ಬೆಳಕು ತೋರಿದ ಶತಮಾನದ ಸಂತ, ಆಧುನಿಕ ಬಸವಣ್ಣನೆಂದೇ ಖ್ಯಾತರಾಗಿದ್ದ ತುಮುಕೂರಿನ ಸಿದ್ಧಗಂಗಾ ಮಠದ ಪೀಠಾಧಿಪತಿ ಶಿವಕುಮಾರ ಮಹಾಸ್ವಾಮೀಜಿ(೧೧೧) ಲಿಂಗೈಕ್ಯರಾದರು. ವಯೋಸಹಜವಾದ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಕುಮಾರ ಸ್ವಾಮೀಜಿ ಶ್ವಾಸಕೋಶದ ಸಮಸ್ಯೆಯಿಂದಾಗಿ ಶಿವೈಕ್ಯರಾದರು.
ಜನವರಿ ೨೩ : ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕ ವಾದ್ರ ನೇಮಕ
೨೦೧೯ರ ನಿರ್ಣಾಯಕ ಹೋರಾಟ ನಡೆಸುವ ಸೂಚನೆ ನೀಡಿರುವ ಕಾಂಗ್ರೆಸ್ ಪ್ರಿಯಾಂಕ ಗಾಂಧಿಯವರ ರಾಜಕೀಯ ಪ್ರವೇಶವನ್ನು ಘೋಷಿಸಿತು. ಪ್ರಿಯಾಂಕ ವಾದ್ರಾ ಅವರಿಗೆ ಕಾಂಗ್ರೇಸ್‌ನ ಪ್ರಧಾನ ಕಾರ್ಯದರ್ಶಿ ಪಟ್ಟವನ್ನು ನೀಡಿ, ರಾಜಕೀಯವಾಗಿ ಮಹತ್ವದ್ದಾಗಿರುವ ಉತ್ತರ ಪ್ರದೇಶದ ಪೂರ್ವ ವಿಭಾಗದ ಪೂರ್ಣ ಜವಾಬ್ದಾರಿಯನ್ನು ನೀಡಲಾಯಿತು.
ಜನವರಿ ೨೫ : ಪ್ರಣವ್ ಸಹಿತ ಮೂವರಿಗೆ ಭಾರತ ರತ್ನ, ಕರ್ನಾಟಕದ ಸಾಲುಮರದ ತಿಮ್ಮಕ್ಕಗೆ ಒಲಿದ ಪದ್ಮಶ್ರೀ
ಮಾಜಿ ರಾಷ್ಟçಪತಿ ಪ್ರಣವ್ ಮುಖರ್ಜಿ, ಸಮಾಜ ಸೇವಕ ನಾನಾಜಿ ದೇಶ್‌ಮುಖ್ ಹಾಗೂ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ದೇಶದ ಅತ್ಯಂತ ಶ್ರೇಷ್ಠ ಪುರಸ್ಕಾರ ‘ಭಾರತ ರತ್ನ’ ಪ್ರಶಸ್ತಿಯನ್ನು ಮತ್ತು ಕರ್ನಾಟಕದ ಸಾಲುಮರದ ತಿಮ್ಮಕ್ಕರನ್ನು ಒಳಗೊಂಡು ಐವರಿಗೆ ಪದ್ಮಶ್ರೀ, ನಾಲ್ವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಯಿತು. ಆಗಷ್ಟ್ ೮ ರಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜನವರಿ ೨೯ : ಜಾರ್ಜ್ ಅಸ್ತಂಗತ
ಮಂಗಳೂರನ್ನು ಮುಂಬೈಗೆ ಸೇರಿಸಿದ ಕೊಂಕಣ ರೈಲ್ವೆಯ ನಿರ್ಮಾತೃ, ಮಾಜಿ ರಕ್ಷಾಣಾ ಸಚಿವ ಜಾರ್ಜ್ ಮ್ಯಾಥ್ಯೂ ಫೆರ್ನಾಂಡಿಸ್(೮೮) ನಿಧನರಾದರು. ಎಂಟು ವರ್ಷಗಳಿಂದ ಮರೆವು ಕಾಯಿಲೆಯಿಂದ ಬಳಲುತ್ತಿದ್ದ ಜಾರ್ಜ್ಗೆ ಎಚ್೧ ಎನ್೧ ಸೋಂಕು ಕೂಡ ತಗಲಿದ್ದರಿಂದ ದಿಲ್ಲಿಯಲ್ಲಿನ ನಿವಾಸದಲ್ಲಿ ಕೊನೆಯುಸಿರೆಳೆದರು.
ಫೆಬ್ರವರಿ ೧೪: ಪುಲ್ವಾಮಾ ಅಟ್ಯಾಕ್, ೪೦ ಭಾರತೀಯ ಸೈನಿಕರ ದುರ್ಮರಣ
ಇಡೀ ದೇಶಕ್ಕೆ ದೇಶವೇ ಬೆಚ್ಚೀಳಿಸಿದ ಘಟನೆಯೊಂದು ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸಂಭವಿಸಿತು. ದೇಶದ ಭದ್ರತಾ ಪಡೆಗಳ ಮೇಲೆ ಈವರೆಗಿ ಅತೀ ದೊಡ್ಡ ಎನ್ನಬಹುದಾದ ಭಯೋತ್ಪಾದಕ ದಾಳಿ ಎಂದೇ ಗುರುತಿಸಹುದಾಗಿದೆ. ಸಿಆರ್‌ಪಿಎಫ್ ಯೋಧರು ಸಾಗುತ್ತಿದ್ದ ವಾಹಕ್ಕೆ ಸ್ಪೋಟಕ ತುಂಬಿದ್ದ ವಾಹ ಡಿಕ್ಕಿ ಹೊಡೆದ ಪರಿಣಾಮ, ಮಂಡ್ಯ ಜಿಲ್ಲೆಯ ಯೋಧ ಗುರು ಸೇರಿ ಸಿಆರ್‌ಪಿಎಫ್‌ನ ೪೦ ಸೈನಿಕರು ಹುತಾತ್ಮರಾದರು.
ಫೆಬ್ರವರಿ ೧೯ : ಬೆಂಗಳೂರು ಏರ್‌ಶೋ ದುರಂತ : ೨೭೭ ಕಾರು ಭಸ್ಮ
‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದ ಮುಂಚಿ ದಿನ ಭಾರಿ ದುರಂತವೊಂದು ಘಟಿಸಿತು. ದೇಶದ ಪ್ರತಿಷ್ಠಿತ ‘ಸೂರ್ಯಕಿರಣ’ ವೈಮಾನಿಕ ಪ್ರದರ್ಶನ ತಂಡದ ಎರಡು ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಕೆಳಕ್ಕುರುಳಿದವು. ಘಟೆಯಲ್ಲಿ ಒಬ್ಬ ಪೈಲಟ್ ಮೃತರಾದರು. ಮರು ದಿ ಏರ್‌ಶೋ ನಡೆಯಿತು. ಅಗ್ನಿ ದುರಂತದಲ್ಲಿ ಬರೋಬ್ಬರಿ ೨೭೭ ಕಾರುಗಳು ಭಸ್ಮವಾದವು.
ಫೆಬ್ರವರಿ ೨೬ : ಪುಲ್ವಾಮ ದಾಳಿಗೆ ಬಾಲಾಕೋಟ್ ಮೇಲೆ ಭಾರತ ಪ್ರತಿಕಾರ
೪೦ ಸಿಆರ್‌ಪಿಎಫ್ ಯೋಧರ ಬಲಿ ಪಡೆದ ಪುಲ್ವಾಮ ದಾಳಿಗೆ ಭಾರತ ಬಾಲಾಕೋಟ್ ಮೇಲೆ ಭಾರತ ಪ್ರತಿಕಾರ ತೀರಿಸಿಕೊಂಡಿದೆ. ಬಾಲಾಕೋಟ್‌ನಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತ ವಾಯುದಾಳಿ ಮಾಡಿ ಉಗ್ರರನ್ನು ಭಸ್ಮಗೊಳಿಸಿತು, ಪ್ರತಿಯಾಗಿ ಪಾಕಿಸ್ಥಾನ ದಂಡೆತ್ತಿ ವಿರುದ್ಧ ಬಂತು. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ಥಾನದ ವಿಮಾನವನ್ನು ಹೊಡೆದುರುಳಿಸಿದರು. ಅಚಾನಾಕಾಗಿ ಅಭಿನಂದನ್ ಪಾಕ್ ವಶಕ್ಕೊಳಗಾದರು, ಹಿಂಸೆಗೊಳಪಟ್ಟರು. ಭಾರತದ ಒತ್ತಡಕ್ಕೆ ಸೋತು ಪಾಕಿಸ್ಥಾನ ನರಿ ಬುದ್ಧಿ ತೋರಿಸಿತಾದರೂ ಮಾ. ೧ ರಂದು ಬಿಡುಗಡೆಗೊಳಿಸಿತು.
ಮಾರ್ಚ್ ೧೪ : ಮಾತೆ ಮಹಾದೇವಿ ಅಮರ
ಕೂಡಲಸಂಗಮ ಸವ ಧರ್ಮ ಪೀಠಾಧ್ಯಕ್ಷೆ, ಮೊದಲ ಮಹಿಳಾ ಜಗದ್ಗುರು ಮಾತೆ ಮಹಾದೇವಿ(೭೪) ಬೆಂಗಳೂರಿಲ್ಲಿ ಅಸ್ತಂಗತರಾದರು.
ಮಾರ್ಚ್ ೧೭ : ಮನೋಹರ್ ಪರಿಕರ್ ನಿಧನ
ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕರ್ ಅನಾರೋಗ್ಯದ ಕಾರಣದಿಂದಾಗಿ ನಿಧನ ಹೊಂದಿದರು. ಮನೋಹರ್ ಪರಿಕರ್ ಪಾಕಿಸ್ತಾನದ ಮೇಲಿನ ಸರ್ಜಿಕಲ್ ದಾಳಿ ೧ ರೂವಾರಿಯಾಗಿದ್ದರು.
ಮಾರ್ಚ್ ೧೯ : ಧಾರವಾಡ : ೧೯ ಬಲಿ
ಧಾರವಾಡ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ೪ ಅಂತಸ್ತಿನ ಕಟ್ಟಡ ಕುಸಿದು ಬಿದ್ದು ೧೯ ಮಂದಿ ಅಸುನೀಗಿದರು.
ಮಾಚ್ ೨೨ : ಸಿ ಎಸ್ ಶಿವಳ್ಳಿ ನಿಧನ
ಪೌರಾಡಳಿತ ಸಚಿವರಾಗಿದ್ದ ಮತ್ತು ಕುಂದಗೋಳದ ಕ್ಷೇತ್ರದ ಶಾಸಕರಾಗಿದ್ದ ಸಿ. ಎಸ್ ಶಿವಳ್ಳಿ(೫೭) ತೀವ್ರ ಎದೆ ನೋವಿನಿಂದ ನಿಧನ ಹೋಂದಿದರು.
ಮಾರ್ಚ್ ೨೭ : ಎಎಸ್‌ಎಟಿ-ಎಸ್ಯಾಟ್ ಹೊಸ ಸಾಹಸ
ಅಂತರಿಕ್ಷದಲ್ಲಿ ಉಪಗ್ರಹ ನಿರೋಧಕ ಎಎಸ್ ಎಟಿ- ಎಸ್ಯಾಟ್ ಕ್ಷಿಪಣಿಯನ್ನು ಉಡಾಯಿಸಿ ಭೂಮಿಯಿಂದ ೩೦೦ ಕಿ.ಮೀ ದೂರದ ಕೆಳ ಭೂಕಕ್ಷೆಯಲ್ಲಿರುವ ಉಪಗ್ರಹವನ್ನು ಧ್ವಂಸ ಮಾಡುವುದರ ಮೂಲಕ ಭಾರತ ನೂತನ ಸಾಹಸ ಮಾಡಿತು.
ಏಪ್ರಿಲ್ ೧೦ : ಭಾರತದ್ದು ೧೩೬ ಕೋಟಿ, ವಿಶ್ವದ್ದು ೭೭೨ ಕೋಟಿ ಜನಸಂಖ್ಯೆ
೨೦೧೯ರ ವಿಶ್ವಸಂಸ್ಥೆಯ ವರದಿಯ ಪ್ರಕಾರ ವಿಶ್ವದ ಜನಸಂಖ್ಯೆ ಬರೋಬ್ಬರಿ ೭೭೨ ಕೋಟಿಗೆ ಏರಿಕೆ ಕಂಡಿದೆ. ಭಾರತದÀ ಜನಸಂಖ್ಯೆ ೧೩೬. ೮ ಕೋಟಿಗೆ ಏರಿಕೆಯಾಗಿದೆ. ಈ ವರದಿಯ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ೨ನೇ ದೇಶ ಎಂಬ ದಾಖಲೆ ಉಳಿಸಿಕೊಂಡಿತು. ೧೪೨ ಕೋಟಿ ಜನಸಂಖ್ಯೆಯೊAದಿಗೆ ಚೀನಾ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.
ಏಪ್ರಿಲ್ ೨೧ : ಶ್ರೀಲಂಕಾ : ಈಸ್ಟರ್ ದಿನ ಸರಣಿ ಸ್ಪೋಟಕ್ಕೆ ೨೯೦ ಜನ ಬಲಿ
ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದ ದಿನ ಭಯೋತ್ಪಾದಕರು ೩ ಪಂಚತಾರ ಹೋಟೇಲುಗಳು, ೩ ಚರ್ಚುಗಳು ಸೇರಿ ೮ ಕಡೆ ಬಾಂಬ್ ದಾಳಿ ಮಾಡಿ ೨೯೦ ಜನರನ್ನು ಬಲಿ ತೆಗೆದುಕೊಂಡರು. ೫ ಜನ ಕರ್ನಾಟಕದವರನು ಒಳಗೊಂಡು ೮ ಭಾರತೀಯರು ದರ್ಮರನಕ್ಕೀಡಾದರು.
ಮೇ ೧ : ಮಸೂದ್ ಅಜರ್‌ಗೆ ಜಾಗತೀಕ ಉಗ್ರಗಾಮಿ ಪಟ್ಟ
ಪುಲ್ವಾಮ ಅಟ್ಯಾಕ್ ಒಳಗೊಂಡು ಭಾರತದ ವಿರುದ್ಧ ಹಲವು ಭಾರಿ ದಾಳಿ ಮಾಡಿದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಮೌಲಾನ ಮಸೂದ್ ಅಜರ್‌ಗೆ ವಿಶ್ವಸಂಸ್ಥೆ ಜಾಗತೀಕ ಉಗ್ರ ಎಂದು ಘೋಷಣೆ ಮಾಡಿತು.
ಮೇ ೨ : ರಂಗಭೂಮಿ ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಅಸ್ತಂಗತ
ಸಮಾಜದ ವ್ಯವಸ್ಥೆಯಲ್ಲಿನ ಅಂಕು, ಡೊಂಕುಗಳ ವಿಡಂಬನೆಗಳಿಗೆ, ವಿನೋದಗಳಿಗೆ ಖ್ಯಾತನಾಮರಾಗಿದ್ದ ನಾಡಿನ ಹಿರಿಯ ರಂಗಭೂಮಿ ನಟ ಮಾಸ್ಟರ್ ಹಿರಣ್ಣಯ್ಯ ವಿಧಿವಶರಾದರು.
ಮೇ ೪ : ಒಡಿಶಾ ಭೀಕರ ಚಂಡಮಾರುತ : ೮೯ ಸಾವು, ಭಾರಿ ನಷ್ಟ
ಕಳೆದ ಇಪ್ಪತ್ತು ವರ್ಷಗಳಲ್ಲೇ ಮೊಟ್ಟಮೊದಲಿಗೆ ಗಂಟೆಗೆ ೧೭೫ ಕಿ. ಮೀ ವೇಗದಲ್ಲಿ ಬೀಸಿದ ಬಿರುಗಾಳಿ ಮತ್ತು ಧಾರಾಕಾರ ಮಳೆ ಒಡಿಶಾದ ಕರಾವಳಿಗೆ ಅಪ್ಪಳಿಸಿತು. ಈ ಪರಿಣಾಮವಾಗಿ ೮೯ ಮಂದಿ ಸಾವನ್ನಪ್ಪಿದರು. ಭಾರಿ ನಷ್ಟಕ್ಕೆ ಎಡೆಮಾಡಿಕೊಟ್ಟಿತು.
ಮೇ ೨೩ : ಮೋದಿ ಮತ್ತೊಮ್ಮೆ : ೨ನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯ
ಲೋಕಸಭಾ ಚುನಾವಣೆಯ ಫಲಿತಾಂಶ ಹೊರಿದ್ದಿತು. ಬಿಜೆಪಿ ೩೦೩ ಸ್ಥಾನಗಳನ್ನು ತನ್ನ ವಶಕ್ಕೆ ಪಡೆಯುವುದರ ಮೂಲಕ ಬಹುಮತದೊಂದಿಗೆ ಗದ್ದುಗೆಗೇರಿತು. ಕಾಂಗ್ರೇಸ್ ಪಕ್ಷ ೫೨ ಸ್ಥಾನಗಳಲ್ಲಿ ಮಾತ್ರ ಗೆಲ್ಲುವ ಮುಖೇನ ತೀವ್ರ ಮುಖಭಂಗ ಅನುಭವಿಸಿತು. ರಾಜ್ಯದಲ್ಲಿ ಬಿಜೆಪಿ ೨೫ ಕ್ಷೇತ್ರಗಳಲ್ಲಿ ಸ್ಥಾನ ಪಡೆದರೆ, ಕಾಂಗ್ರೇಸ್ ಮತ್ತು ಜೆಡಿಎಸ್ ತಲಾ ೧ ಸ್ಥಾನವನ್ನು ಪಡೆಯಿತು. ರಾಜ್ಯದಲ್ಲಿಯೂ ಕಾಂಗ್ರೆಸ್ ಅವಮಾನಕ್ಕೊಳಗಾಯಿತು.
ಮೇ ೩೦ : ಮೋದಿ ಅಧಿಕಾರ ಸ್ವೀಕಾರ
ಎರಡನೇ ಅವಧಿಗೆ ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯದ ಸದಾನಂದ ಗೌಡ, ಸುರೇಶ್ ಅಂಗಡಿ, ಪ್ರಹ್ಲಾದ್ ಜೋಷಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ೫೭ ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ಜೂನ್ ೧೦ : ಜ್ಙಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನ
ಕನ್ನಡದ ಹಿರಿಯ ಸಾಹಿತಿ, ರಂಗಕರ್ಮಿ, ಬಹುಭಾಷಾ ನಟ ಗಿರೀಶ್ ಕಾರ್ನಾಡ್(೮೧) ನಿಧನರಾದರು. ಅವರ ಇಚ್ಛೆಯಂತೆ ಧಾರ್ಮಿಕ ವಿಧಿವಿಧಾನಗಳಿಲ್ಲದೇ ಅಂತ್ಯಕ್ರಿಯೆ ನಡೆಸಲಾಯಿತು.
ಜೂನ್ ೧೦ : ಕ್ರಿಕೇಟ್‌ಗೆ ಸಿಕ್ಸರ್ ಕಿಂಗ್ ಗುಡ್‌ಬಾಯ್
೨೦೧೧ರ ವಿಶ್ವಕಪ್‌ನ ಹೀರೋ, ಕಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದ ವೀರ, ಸಿಕ್ಸರ್ ಕಿಂಗ್ ಎಂದೇ ಖ್ಯಾತಿಗಳಿಸಿದ ಭಾರತದ ಕ್ರಿಕೇಟ್ ತಂಡದ ಎಡಗೈ ಬ್ಯಾಟ್ಸನ್ ಯುವರಾಜ್ ಸಿಂಗ್ ಕ್ರಿಕೇಟ್‌ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು.
ಜುಲೈ ೩ : ರಾಹಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ
ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಹೋಣೆ ಹೊತ್ತ ಕಾಂಗ್ರೇಸ್ ಪಕ್ಷದ ರಾಷ್ಟಿçÃಯ ಅಧ್ಯಕ್ಷ ರಾಹುಲ್ ಗಾಂಧಿ ೪ ಪುಟಗಳ ರಾಜೀನಾಮೆ ಪತ್ರವನ್ನು ಸ್ವೀಕರಿಸಿದರು.
ಜುಲೈ ೪ : ಬ್ಯಾಂಕಿಂಗ್ ಪರೀಕ್ಷೆಗೆ ಕನ್ನಡಲ್ಲಿ ಅವಕಾಶ : ಕೇಂದ್ರ ಸರ್ಕಾರ ಒಪ್ಪಿಗೆ
ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿಗೆ ಕನ್ನಡವನ್ನೊಳಗೊಂಡು ೧೩ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು.
ಜುಲೈ ೫ : ಚೊಚ್ಚಲ ಬಜೆಟ್‌ನಲ್ಲಿ ವಿಶೇಷತೆ ಮೆರೆದ ನಿರ್ಮಲಾ ಸೀತಾರಾಮನ್
ಕೇಂದ್ರದ ಮೊದಲ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್‌ನ್ನು ಸೂಟ್‌ಕೇಸ್ ಬದಲಾಗಿ ರಾಷ್ಟಿçÃಯ ಲಾಂಛನ ಹೊಂದಿದ ಕೆಂಪು ಚೀಲದಲ್ಲಿ ತಂದು ಮಂಡಿಸಿ ಗಮನ ಸೆಳೆದರು.
ಜುಲೈ ೬ : ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಅತೃಪ್ತರ ರಾಜಿನಾಮೆ
ಜುಲೈ ೬ರಂದು ಒಟ್ಟು ೧೨ ಮೈತ್ರಿ ಸಕಾರದ ಅತೃಪ್ತ ಶಾಸಕರು ರಾಜಿನಾಮೆ ಸಲ್ಲಿಸಿದರು. ಒಟ್ಟು ಜುಲೈ ೨೩ರೊಳಗೆ ೧೭ ಮಂದಿ ಸ್ಪೀಕರ್‌ಗೆ ತ್ಯಾಗಪತ್ರವನ್ನು ಸಲ್ಲಿಸಿದರು.
ಜುಲೈ ೧೪ : ಅಚ್ಚರಿಯ ಫಲಿತಾಂಶಕ್ಕೆ ಪಾತ್ರವಾದ ಕ್ರಿಕೇಟ್ ವಿಶ್ವಕಪ್ ಫೈನಲ್ ಪಂದ್ಯ
ಇಂಗ್ಲೆಂಡ ಮತ್ತು ನ್ಯೂಜ್ಹಿಲ್ಯಾಂಡ್ ನಡುವೆ ನೆಡೆದ ವಿಶ್ವಕಪ್ ೨೦೧೯ ಫೈನಲ್ ಪಂದ್ಯ ಟೈ ಆಗಿತ್ತು, ಸೂಪರ್ ಓವರ್‌ಲ್ಲಿ ಸಹ ಟೈ ಆದ ಕಾರಣವಾಗಿ ಫೈನಲ್ ಪಂದ್ಯದಲ್ಲಿ ಬಾರಿಸಿದ ಬೌಂಡರಿಗಳ ಸಂಖ್ಯೆಯನ್ನು ಪರಿಗಣಿಸಿ ವಿಜೇತರನ್ನು ನಿರ್ಧರಿಸಲಾಯಿತು. ೨೬ ಬೌಂಡರಿಗಳನ್ನು ಬಾರಿಸಿದ ಇಂಗ್ಲೆಂಡ ತಂಡವನ್ನು ವಿಶ್ವಕಪ್ ೨೦೧೯ರ ವಿಜೇತ ತಂಡವೆಂದು ಘೋಷಿಸಲಾಯಿತು. ಈ ನಿರ್ಧಾರ ಅಂತರಾಷ್ಟ್ರೀಯ ಮಟ್ಟದ ಕ್ರಿಕೇಟ್ ವಲಯದಲ್ಲಿ ಹಲವು ಪರ ವಿರೋಧಗಳ ಚರ್ಚೆಗೆ ಪಾತ್ರವಾಯಿತು.
ಜುಲೈ ೧೯ : ಐಎಮ್‌ಎ ಹಗರಣ,ಮನ್ಸೂರ್ ಬಂಧನ
ಭಾರಿ ಬಡ್ಡಿ ಆಸೆ ತೋರಿಸಿ ಮುಸ್ಲೀಂರನ್ನು ವಂಚಿಸಿದ ಐಎಂಎ ಹಗರಣದಲ್ಲಿ ಸಿಲುಕಿದ ಸಂಸ್ಥೆಯ ಮಾಲಿಕ ಮನ್ಸೂರ್ ಖಾನ್, ಹೂಡಿಕೆದಾರರಿಗೆ ೧೨೦೦ ಕೋಟಿ ರೂ. ಗಿಂತ ಹೆಚ್ಚು ಹಣ ಮರಳಿಸದೆ ದುಬೈಗೆ ಪರಾರಿಯಾಗಿದ್ದ. ಕರ್ನಾಟಕದ ಎಸ್‌ಐಟಿ ಜುಲೈ ೧೯ರಂದು ಮನ್ಸೂರ್ ಖಾನ್‌ನನ್ನು ಬಂಧಿಸತು.
ಜುಲೈ ೨೬ : ನಾಲ್ಕನೇ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿ
ಕಾಂಗ್ರೇಸ್-ಜೆಡಿಎಸ್ ಮೈತ್ರಿ ಸರ್ಕಾರ ಅತೃಪ್ತ ಶಾಸಕರ ರಾಜಿನಾಮೆಯಿಂದ ಅಂತ್ಯಗೊAಡ ಪರಿಣಾಮವಾಗಿ ಬಿ, ಎಸ್ ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಜುಲೈ ೩೧ : ಕಾಫಿ ಡೇ ಸಿದ್ದಾರ್ಥ್ ನಿಗೂಢ ಸಾವು
ಜು. ೨೯ರ ರಾತ್ರಿಯಿಂದ ನಿಗೂಢವಾಗಿ ಕಣ್ಮರೆಯಾಘಿದ್ದ ಮಾಜಿ ಮುಖ್ಯಮಂತ್ರಿ ಎಸ್. ಎಮ್ ಕೃಷ್ ಅವರ ಅಳಿಯ, ಕೆಫೆ ಕಾಫಿ ಡೇ ಕಂಪನಿಯ ಮಾಲಿಕ ಸಿದ್ಧಾರ್ಥ್ ಮಂಗಳೂರಿನ ಹೊಯಿಗೆ ಬಜ್ಹಾರ್ ಬಳಿಯಲ್ಲಿ ಶವವಾಗಿ ಪತ್ತೆಯಾದರು. ಅವರ ದುರಂತ ಸಾವಿಗೆ ಕೇಂದ್ರ ತನಿಖಾ ತಂಡಗಳ ಒತ್ತಡವೇ ಕಾರಣ ಎಂಬ ಆರೋಪವೂ ಕೇಳಿಬಂತು.
ಆಗಸ್ಟ್ ೫ : ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ರದ್ದು
೭೦ ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಲಭ್ಯವಾಗಿದ್ದ ಸಂವಿಧಾನದ ೧೭೦ನೇ ವಿಧಿಯನ್ನು ಕೇಂದ್ರ ಸರ್ಕಾರ ನಿಷ್ಕಿçಯೆಗೊಳಿಸುವುದರ ಮೂಲಕ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಗಳನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು. ಮಾತ್ರವಲ್ಲದೇ ಈ ಕುರಿತಾಗಿ ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಿತು.
ಆಗಸ್ಟ್ ೬ : ಸುಷ್ಮಾ ಸ್ವರಾಜ್ ನಿಧನ
ಬಿಜೆಪಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್(೬೭) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದರು.
ಆಗಸ್ಟ್ ೯ : ರಾಜ್ಯದಲ್ಲಿ ಜಲಪ್ರಳಯ, ಜಲಾಶಯಗಳು ಭರ್ತಿ
ಕರ್ನಾಟಕದಲ್ಲಿ ನಿಧಾನವಾಗಿ ಮುಂಗಾರು ವೇಗ ಕಂಡುಕೊಂಡತು. ಈ ಪರಿಣಾಮವಾಗಿ ಉತ್ತರ ಕರ್ನಾಟಕದ ನದಿಗಳು ಉಕ್ಕಿ ಹರಿದವು. ಜಲಪ್ರಳಯದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಯಿತು. ಭಾರಿ ನಷ್ಟ ಅನುಭವಿಸಬೇಕಾಯಿತು. ಲಕ್ಷೊಪಲಕ್ಷ ಮಂದಿ ನಿರಾಶ್ರಿತರಾದರು, ಅಂದಾಜು ೫೦ಕ್ಕೂ ಹೆಚ್ಚು ಮಂದಿ ಸಾವಿಗೀಡಾದರು.
ಆಗಸ್ಟ್ ೯ : ‘ಮ್ಯಾನ್ ವರ್ಸಸ್ ವೈಲ್ಡ್’ನಲ್ಲಿ ಮೋದಿ ಭಾಗಿ
ಪರಿಸರ ಕಾಳಜಿ ಬಿಂಬಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಶೇಷ ಕಾರ್ಯಕ್ರಮ ‘ಮ್ಯಾನ್ ವರ್ಸಸ್ ವೈಲ್ಡ್’ ಜಗತ್ತಿನ ೧೮೦ ದೇಶಗಳಲ್ಲಿ ಪ್ರಸಾರವಾಯಿತು.
ಆಗಸ್ಟ್ ೧೦ : ಕಾಂಗ್ರೆಸ್‌ಗೆ ನೂತನ ಅಧ್ಯಕ್ಷೆ
ಸೋನಿಯಾ ಗಾಂಧಿಯವರು ರಾಷ್ಟ್ರೀಯ ಕಾಂಗ್ರೇಶ್ ಪಕ್ಷಕ್ಕೆ ಹಂಗಾಮಿ ಅಧ್ಯಕ್ಷೆಯಾಗಿ ನೇಮಕಗೊಂಡರು.
ಆಗಸ್ಟ್ ೨೧ : ಚಿದಂಬರಂ ಬಂಧನ
ಹೈಡ್ರಾಮಗಳ ನಂತರ ಐಎನ್‌ಎಕ್ಸ್ ಮೀಡಿಯಾ ಹಗರಣ ಸಂಬಂಧ ಕಾಂಗ್ರೆಸ್ ಪ್ರಭಾವಿ ನಾಯಕ ಹಾಗೂ ಕೇಂದ್ರದ ಮಾಜಿ ವಿತ್ತ ಸಚಿವ ಚಿದಂಬರಂ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೊಳಗಾದರು. ೧೦೬ ದಿನಗಳ ನಂತರ ಜಾಮೀನಿನ ಮೇಲೆ ಚಿದಂಬರಂ ಬಂಧನ ಮುಕ್ತರಾದರು.
ಆಗಸ್ಟ್ ೨೪ : ಅರುಣ್ ಜೇಟ್ಲಿ ವಿಧಿವಶ.
ಬಿಜೆಪಿಯ ಹಿರಿಯ ನಾಯಕ ದೀರ್ಘ ಕಾಲದ ಅನಾರೋಗ್ಯದ ಕಾರಂದಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಸಪ್ಟೆಂಬರ್ ೨ : ಗಣೇಶ ಚತುರ್ಥಿ
ವಿಘ್ನನಿವಾರಕ ಗಣೇಶ ಚತುರ್ಥಿಯ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಯಿತು.
ಸಪ್ಟೆಂಬರ್ ೩ : ಕಾಂಗ್ರೇಸ್ ಟ್ರಬಲ್ ಶೂಟರ್ ಡಿ. ಕೆ. ಶಿ ಬಂಧನ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಜಾರಿ ನಿರ್ದೇಶನಾಲಯ ಕಾಂಗ್ರೇಸ್ ಪಕ್ಷದ ಕರ್ನಾಟಕದ ಪ್ರಭಾವಿ ನಾಯಕ ಡಿ. ಕೆ. ಶಿ ಬಂಧನ. ೫೦ ದಿನಗಳ ನಂತರ ಜಾಮೀನಿನ ಮೇಲೆ ಬಂಧನದಿಂದ ಬಿಡುಗಡೆ.
ಸಪ್ಟೆಂಬರ್ ೫ : ಕೊಡಗಿನಲ್ಲಿ ರೆಡ್ ಅಲರ್ಟ್...!
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾದ ಕಾರಣ ಹವಮಾನ ಇಲಾಖೆ ಮುನ್ಸೂಚನೆಯನ್ನು ಸೂಚಿಸಿದೆ. ಜಿಲ್ಲೆಯಾದ್ಯಂತ ೨೦೧೮ರಲ್ಲಿ ಘಟಿಸಿದ ಭಾರಿ ಅನಾಹುತವನ್ನು ಗಮನದಲ್ಲಿಟ್ಟುಕೊಂಡು ರೆಡ್ ಅಲರ್ಟ್ ಘೋಷಿಸಿದೆ.
ಸಪ್ಟೆಂಬರ್ ೫ : ಸುರೇಶ್ ಮರಕಾಲರಿಗೆ ರಾಷ್ಟçಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಹೊಸದಿಲ್ಲಿಯಲ್ಲಿ ನಡೆದ ಸಮಾರಂದಲ್ಲಿ ರಾಷ್ಟçಪತಿ ರಾಮನಾಥ ಕೋವಿಂದ್ ಅವರು ರಾಷ್ಟçಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮೂಲತಃ ಉಡುಪಿ ಜಿಲ್ಲೆಯ ಬಾರ್ಕೂರಿನ ಸ್ಯಾಬರಕಟ್ಟೆಯವರಾದ ಪ್ರಸ್ತುತ ಕೊಡಗಿನ ಸೋಮವಾರಪೇಟೆ ತಾಲೂಕಿನ ಬೆಸೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಸುರೇಶ್ ಮರಕಾರ ಅವರಿಗೆ ಪ್ರದಾನ ಮಾಡಿದರು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಕ್ರಿವಾಲ್ ನಿಶಾಂಕ್ ಉಪಸ್ಥಿತರಿದ್ದರು.
ಸಪ್ಟೆಂಬರ್ ೬ : ದ.ಕ ಜಿಲ್ಲಾಧಿಕಾರಿ ಸೆಂಥಿಲ್ ರಾಜಿನಾಮೆ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಭಾರತೀಯ ಆಡಳಿತ ಸೇವೆಗೆ(ಐಎಎಸ್) ದಿಢೀರ್ ರಾಜಿನಾಮೆ ಸಲ್ಲಿಸಿದರು. ಸೆಂಥಿಲ್ ರಾಜಿನಾಮೆಯಿಂದ ತೆರವಾಗಿರುವ ದ.ಕ ಜಿಲ್ಲಾಧಿಕಾರಿ ಹುದ್ದೆಗೆ ಉಡುಪಿ ಜಿಲ್ಲೆ ಸಿಇಒ ಸಿಂಧೂ ರೂಪೇಶ್ ಅವರನ್ನು ದ.ಕ ಜಿಲ್ಲಾಧಿಕಾರಿಯಾಗಿ ನೇಮಿಸಲಾಯಿತು.
ಸಪ್ಟೆಂಬರ್ ೬ : ಹೈದರಾಬಾದ್ ಕರ್ನಾಟಕ ಭಾಗ ಈಗ ಕಲ್ಯಾಣ ಕರ್ನಾಟಕ
ಕಲುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿಯನ್ನೊಳಗೊಂಡ ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರಿಡಲು ರಾಜ್ಯ ಸರ್ಕಾರ ತೀರ್ಮಾನಿಸಿತು.
ಸಪ್ಟೆಂಬರ್ ೮ : ವಿಕ್ರಮ್ ಲ್ಯಾಂಡರ್ ಗೋಚರ..!
ಚಂದ್ರನ ಮೇಲೆ ಇಳಿಯುವ ಕೊನೆಯ ಸಮಯದಲ್ಲಿ ಸಂಪರ್ಕದಿAದ ಕಳಚಿಕೊಂಡಿದ್ದ ವಿಕ್ರಮ್ ಲ್ಯಾಂಡರ್ ಅನ್ನು ಇಸ್ರೋ ಪತ್ತೆಹಚ್ಚಿತು. ಚಂದ್ರನಿAದ ನೂರು ಕಿ.ಮೀ ದೂರದಲ್ಲಿ ಸುತ್ತುತ್ತಿರುವ ಆರ್ಬಿಟರ್ ಸೆರೆಹಿಡಿದ ಚಿತ್ರವನ್ನು ವಿಶ್ಲೇಷಿಸಿದ ಇಸ್ರೋ ತಂಡ ವಿಕ್ರಮ್ ಇರುವ ಸ್ಥಳ ಕಂಡುಕೊAಡಿತು. ವಿಕ್ರಮ್ ಜೊತೆಗೆ ಸಂಪರ್ಕ ಮಾಡಲು ಇಸ್ರೋ ಪ್ರಯತ್ನಿಸುತ್ತದೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ತಿಳಿಸಿದರು.
ಸಪ್ಟೆಂಬರ್ ೧೧ : ದಂಡ ಶೇ. ೫೦ ಇಳಿಕೆ..!
ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ದುಬಾರಿ ದಂಡದ ಪ್ರಮಾಣವನ್ನು ಅರ್ಧಕ್ಕರ್ಧ ಇಳಿಸಲು ಸರ್ಕಾರ ನಿರ್ಧರಿಸಿತು.
ಸಪ್ಟೆಂಬರ್ ೧೧ : ಚಂದ್ರನ ಮೇಲೆ ಔಕೆ ಇಳಿಸುವ ಇಸ್ರೋ ಸಾಹಸ ವಿಫಲ
ವಿಕ್ರಮ್ ಲ್ಯಾಂಡರ್ ಹೆಸರಿನ ಲ್ಯಾಂಡರ್‌ನನ್ನು ಚಂದ್ರನ ದಕ್ಷಿಣ ಭಾಗದಲ್ಲಿ ಇಳಿಸಿ ಹೊಸ ಇತಿಹಾಸ ಸೃಷ್ಟಿಗೆ ಮುಂದಾಗಿದ್ದ ಇಸ್ರೋ ಪ್ರಯತ್ನಕ್ಕೆ ಹಿನ್ನೆಡೆಯಾಯಿತು. ಚಂದ್ರ ಮೇಲ್ಮೈನಿಂದ ೨.೧ ಕಿ.ಮೀ ದೂರದಲ್ಲಿದ್ದಾಗ ಭೂಮಿಯಿಂದ ಸಂಪರ್ಕ ಕಳೆದುಕೊಂಡು ನಿಗೂಢವಾಗಿ ಲ್ಯಾಂಡರ್ ನಾಪತ್ತೆಯಾಯಿತು. ಇಸ್ರೋ ಮುಖ್ಯಸ್ಥ ಕೆ. ಶಿವನ್ ಕಣ್ಣೀರಿಟ್ಟರು. ಪ್ರಧಾನಿ ಸಾಂತ್ವಾನ ಹೇಳಿದರು.
ಸಪ್ಟೆಂಬರ್ ೧೨ : ಕೋಟ್ಲಾ ಮೈದಾನಕ್ಕೆ ಮರುನಾಮಕರಣ
ಹೊಸದಿಲ್ಲಿನ ಐತಿಹಾಸಿಕ ಕ್ರಿಕೇಟ್ ಸ್ಟೇಡಿಯಂ ‘ಫಿರೋಜ್ ಶಾ ಕೋಟ್ಲಾ’ ಮೈದಾನಕ್ಕೆ ಜವಹರಲಾಲ್ ನೆಹರು ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಡಿಜಿಟಲ್ ರೂಪದಲ್ಲಿ ಹೆಸರನ್ನು ಅರುಣ್ ಜೇಟ್
ಸಪ್ಟೆಂಬರ್ ೧೪ : ಏಕ ದೇಶ ಏಕ ಭಾಷೆ
ಒಂದು ದೇಶ, ಒಂದು ಭಾಷೆ ಪರಿಕಲ್ಪನೆಯ ಅಡಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅಧಿಕೃತ ಭಾಷೆ ಹಿಂದಿ ಎಂದು ಪರಿಗಣಿಸಲ್ಪಟ್ಟರೆ ಒಳಿತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ದೇಶದಲ್ಲಿ ಹಿಂದಿ ಭಾಷಿಕರೇ ಜಾಸ್ತಿ ಇರುವ ಕಾರಣ ಅದನ್ನೇ ರಾಷ್ಟ್ರೀಯ ಭಾವೈಕ್ಯದ ಭಾಷೆಯೆಂದು ಪರಿಗಣಿಸಬಹುದು ಎಂದು ಅಮಿತಾ ಶಾ ಹೇಳಿದರು.
ಸೆಪ್ಟೆಂಬರ್ ೧೫ : ಬೋಟ್ ದುರಂತ ೧೨ಕ್ಕೂ ಹೆಚ್ಚು ಸಾವು
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಗೋದಾವರಿ ನದಿಯಲ್ಲಿ ೬೦ ಮಂದಿ ಪ್ರಯಾಣಿಸುತ್ತಿದ್ದ ಪ್ರವಾಸಿ ಬೋಟ್ ಮುಳುಗಿ ೧೨ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ೨೭ ಪ್ರಯಾಣಿಕರನ್ನು ರಕ್ಷಿಸಲಾಯಿತು.
ಸಪ್ಟೆಂಬರ್ ೧೬ : ಪೂಜಾರಿಗೆ ದ.ಕ, ಬೊಮ್ಮಾಯಿಗೆ ಉಡುಪಿ ಉಸ್ತುವಾರಿ ಪಟ್ಟ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರುಗಳ ಉಸ್ತುವಾರಿ ಸಚಿವರುಗಳ ನೇಮಕ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಗೆ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಜಿಲ್ಲೆಗೆ ಬಸವರಾಜ್ ಬೊಮ್ಮಾಯಿಯನ್ನು ನೇಮಕ ಮಾಡಿದರು.
ಸಪ್ಟೆಂಬರ್ ೧೮ : ವಸತಿಗೆ ಸಾವಿರ ಕೋಟಿ
ರಾಜ್ಯದಲ್ಲಿನ ನೆರೆ ಪ್ರಕೋಪದಿಂದ ನೊಂದವರ ನೆರವಿಗೆ ರಾಜ್ಯ ಸರ್ಕಾರ ನಿರ್ಧರಿಸಿತು. ಸಂಪೂರ್ಣ ಮನೆ ಕಳೆದುಕೊಂಡವರಿಗೆ ತ್ವರಿತವಾಗಿ ಮನೆ ಕಟ್ಟಿಕೊಳ್ಳಲು ಖಜಾನೆಯಿಂದಲೇ ೧ ಸಾವಿರ ಕೋಟಿ ರೂ ಬಿಡುಗಡೆ ಮಾಡುವುದಾಗಿ ಘೋಷಿಸಿತು. ಮಾತ್ರವಲ್ಲದೇ, ರಸ್ತೆ ನಿರ್ಮಾಣಕ್ಕೆ ೫೦೦ ಕೋಟಿ ರೂ ಅನುದಾನ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿತು.
ಸಪ್ಟೆಂಬರ್ ೧೯ : ತಿಹಾರ್ ಸೇರಿದ ಡಿಕೆಶಿ
ಅಕ್ರಮ ಹಣ ಸಾಗಾಟ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಯಿತು. ಇದೇ ಮೊದಲ ಬಾರಿಗೆ ತಿಹಾರ್ ಜೈಲು ಸೇರಿದ ಕರ್ನಾಟಕದ ರಾಜಕಾರಿಣಿ ಎಂಬ ಕುಖ್ಯಾತಿಗೂ ಪಾತ್ರರಾದರು.
ಸಪ್ಟೆಂಬರ್ ೨೨ : ಹೌಡಿ ಮೋದಿ
ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾಗವಹಿಸಲು ಅಮೇರಿಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹ್ಯೂಸ್ಟನ್‌ನಲ್ಲಿ ಏರ್ಪಡಿಸಲಾದ ಬೃಹತ್ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹ್ಯೂಸ್ಟನ್‌ನಲ್ಲಿರುವ ಎನ್‌ಆರ್‌ಸಿ ಸ್ಟೇಡಿಯಂನಲ್ಲಿ ಅನಿವಾಸಿ ಭಾರತೀಯರು, ಅಮೇರಿಕನ್ನರು ಕಿಕ್ಕಿರಿದು ಸೇರಿದ್ದರು.
ಸಪ್ಟೆಂಬರ್ ೨೩ : ಮಾಜಿ ಕ್ರಿಕೇಟಿಗ ಆಪ್ಟೆ ನಿಧನ
ಟೆಸ್ಟ್ ಸರಣಿಯೊಂದರಲ್ಲಿ ೪೦೦ರನ್ ಬಾರಿಸಿದ ಭಾರತದ ಮಾಜಿ ಕ್ರಿಕೇಟಿಗ ಮಾಧವ ಆಪ್ಟೆ ಮುಂಬಯಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನ ಹೋಂದಿದರು.
ಸಪ್ಟೆಂಬರ್ ೨೪ : ಅಮಿತಾಭ್‌ಗೆ ‘ಫಾಲ್ಕೆ’ ಗೌರವ
ಭಾರತೀಯ ಚಿತ್ರರಂಗದಲ್ಲಿ ಜೀವಮಾನ ಸಾಧನೆ ಮಾಡಿದವರಿಗೆ ನೀಡುವ ಮೇರು ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಹಿಂದಿ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವ ಪ್ರಕಾಶ್ ಜಾವೇಡ್ಕರ್ ತಿಳಿಸಿದರು.
ಸಪ್ಟೆಂಬರ್ ೨೬ : ಅಲೋಕ್ ಕುಮಾರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ
ರಾಜ್ಯ ಪೋಲಿಸ್ ಇಲಾಖೆಗೆ ಭಾರೀ ಮುಜುಗರ ಉಂಟುಮಾಡಿದ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ಸಂಬಂಧ ಸಿಬಿಐ ಅಧಿಕಾರಿಗಳು ಹಿರಿಯ ಐಪಿಎಸ್ ಅಧಿಕಾರಿ ಕೆಎಸ್ ಆರ್‌ಪಿ ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಿತು.
ಸಪ್ಟೆಂಬರ್ ೨೭ : ಉಪಚುನಾವಣೆ ಡಿ. ೫
ರಾಜ್ಯದ ಹದಿನೈದು ವಿಧಾನ ಸಭೆ ಕ್ಷೇತ್ರಗಳ ಉಪ ಚುನಾವಣೆ ರದ್ದುಗೊಂಡು ಅನರ್ಹಗೊಂಡವರು ನಿರಾಳರಾದ ಬೆನ್ನಿಗೆ ಚುನಾವಣಾ ಆಯೋಗ ಡಿ. ೫ ರಂದು ಉಪಚುನಾವಣೆ ದಿನಾಂಕವನ್ನು ನಿಗದಿಪಡಿಸಿತು.
ಸಪ್ಟೆಂಬರ್ ೨೮ : ಉಗ್ರ ಉಸಮಾ ಹತ್ಯೆ
ಜಮ್ಮು- ಕಾಶ್ಮೀರದ ರಾಮಬನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಗಡಿ ಭದ್ರತಾ ಪಡೆಗಳು ಒಂಬತ್ತು ಗಂಟೆಗಳ ಕಾಲ ನಿರಂತರ ಕರ‍್ಯಾಚರಣೆ ನಡೆಸಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರವಾದಿ ಸಂಘಟನೆಯ ಸ್ವಘೋಷಿತ ಕಮಾಂಡರ್ ಉಸಮಾ ಮತ್ತು ಇಬ್ಬರು ಸಹಚರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಯಿತು.
ಸಪ್ಟೆಂರ್ ೩೧ : ಮಳೆ ಭೋರ್ಗೆರತಕ್ಕೆ ೧೩೪ ಬಲಿ
ಬಿಹಾರ್ ಮತ್ತು ಉತ್ತರಪ್ರದೇಶದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು. ಮಳೆ ಕಾರಣದಿಂದಾಗಿ ಮೃತಪಟ್ಟವರ ಸಂಖ್ಯೆ ೧೩೪ಕ್ಕೆ ಏರಿದೆ.
ಅಕ್ಟೋಬರ್ ೨ : ಸ್ವಚ್ಛ ಭಾರತಕ್ಕೆ ೫ ವರ್ಷ
ಸ್ವಚ್ಛ ಭಾರತ ಯೋಜನೆ ಪ್ರಾರಮಭವಾಗಿ ಇಂದಿಗೆ ಐದು ವರ್ಷ ಪೂರ್ಣವಾಯಿತು. ಈ ಯೋಜನೆ ಅಡಿಯಲ್ಲಿ ನೂರಾರು ಕಾರ್ಯಕ್ರಮಗಳನು ಹಮ್ಮಿಕೊಳ್ಳಲಾಗಿತ್ತು. ಬಹಳ ಮುಖ್ಯವಾಗಿ ಬಯಲು ಶೌಚಾಲಯಕ್ಕೆ ಪೂರ್ಣ ವಿರಾಮವನ್ನಿಡಲಾಯಿತು. ಜನರಿಗೆ ಆರೋಗ್ಯ ವೃದ್ಧಿಸುವ ಧ್ಯೇಯದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಇದೀಗ ಶೇ. ೯೯ ರಷ್ಟು ಶೌಚಾಲಯವನ್ನು ನಿರ್ಮಿಸಲಾಗಿದೆ.
ಅಕ್ಟೋಬರ್ ೨ : ೧೫೦ನೇ ಗಾಂಧಿ ಜಯಂತಿ
ದೇಶದೆಲ್ಲೆಡೆ ೧೫೦ನೇ ಗಾಂಧಿ ಜಯಂತಿಯನ ಮತ್ತು ೧೧೫ನೇ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.
ಅಕ್ಟೋಬರ್ ೩ : ‘ವಂದೇ ಭಾರತ’ ಎಕ್ಸ್ಪ್ರೆಸ್ ಟ್ರೆöÊನ್‌ಗೆ ಚಾಲನೆ
ಹೊಸದಿಲ್ಲಿಯನ ವೈಷ್ಟೋದೇವಿಯ ದೇಗುಲ ಬಳಿಯ ಕಾಶ್ಮೀರದ ಕಾಟ್ರಾ ರೈಲು ನಿಲ್ದಾಣ ಮತ್ತು ದಿಲ್ಲಿ ನಡುವಿನ ನೂತನ ‘ವಂದೇ ಭಾರತ’ ಎಕ್ಸ್ಪ್ರೆಸ್ ಟ್ರೈನ್ ಗೆ ಚಾಲನೆ ನೀಡಲಾಯಿತು.
ಅಕ್ಟೋಬರ್ ೪ : ಉತ್ತರಕ್ಕೆ ೧೨೦೦ ಕೋಟಿ ಕೇಂದ್ರ ನೆರವು
ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕೆ ಸಂಬಂಧ ಪಟ್ಟಂತೆ ಜನರ ಆಕ್ರೋಶಕ್ಕೆ ಮಣಿದು ಕೊನಗೂ ೧೨೦೦ ಕೋಟಿ ರೂ ನೆರೆ ಪರಿಹಾರ ನಿಧಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತು.
ಅಕ್ಟೋಬರ್ ೫ : ಮೈಸೂರು ದಸರಾ ವೇಳೆ ಬಾಂಬ್ ಸ್ಫೋಟಕ್ಕೆ ಉಗ್ರರ ಸಂಚು
ಮೈಸೂರು ದಸರಾ ಸಂದರ್ಭದಲ್ಲಿ ಸ್ಫೋಟಕ್ಕೆ ಸಂಚು ಹೂಡಿದ್ದ ಶಂಕೆಯ ಅನ್ವಯ ಹಿಬ್ಜುಲ್ ಮುಜಾಹಿದ್ದಿನ್ ಸಂಘಟನೆಯ ನಾಲ್ವರು ಉಗ್ರರನ್ನು ರಾಷ್ಟ್ರೀಯ ಭದ್ರತಾ ಪಡೆ(ಎನ್‌ಐಎ) ಅಧಿಕಾರಿಗಳು ಬಂಧಿಸಿದರು.
ಅಕ್ಟೋಬರ್ ೮ : ಭಾರತಕ್ಕೆ ರಫೆಲ್ ಆಗಮನ
ಭಾರತೀಯ ವಾಯುಪಡೆಗೆ ಹೊಸ ಶಕ್ತಿಯಾಗಿ ಫ್ರಾನ್ಸ್ನಿಂದ ಪಡೆಯುತ್ತಿರುವ ರಫೆಲ್ ಯುದ್ಧ ವಿಮಾನ ಸರಣಿಯ ಮೊದಲ ವಿಮಾನವು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಗೊಂಡಿತು.
ಅಕ್ಟೋಬರ್ ೮ : ಮೈಸೂರು ದಸರಾ ಸಂಪನ್ನ
ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವವು ಚಿನ್ನದ ಅಂಬಾರಿ ಜಂಬೂ ಸವಾರಿಯ ಮೆರವಣಿಗೆಯೊಂದಿಗೆ ಸಂಭ್ರಮದ ತೆರೆ ಕಂಡಿತು.
ಅಕ್ಟೋಬರ್ ೧೧ : ಕದ್ರಿ ರಾಗ ಮೌನ
ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲ್‌ನಾಥ್ ವಿಧಿವಶರಾದರು.
ಅಕ್ಟೋಬರ್ ೧೨ : ಭಾರತ - ಚೀನಾ ಶೃಂಗ ಸಭೆ
ಚೆನ್ನೈ ಕಡಲ ತೀರದಲ್ಲಿ ನಡೆದ ಎರಡು ದಿನಗಳ ಭಾರತ ಮತ್ತು ಚೀನಾ ದೇಶಗಳ ನಡುವಿನ ಅನೌಪವಾರಿಕಾ ಶೃಂಗಸಭೆಯು ಎರಡೂ ದೇಶಗಳ ಬಾಂಧವ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿತು.
ಅಕ್ಟೋಬರ್ ೧೪ : ಅಭಿಜಿತ್‌ಗೆ ಅರ್ಥಶಾಸ್ತç ನೋಬೆಲ್
ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ, ಅವರ ಧರ್ಮಪತ್ನಿ ಎಸ್ತರ ಸೇರಿ ಮೂವರಿಗೆ ಅರ್ಥಶಾಸ್ತçಕ್ಕೆ ನೋಬೆಲ್ ಪಾರಿತೋಷಕ ಪ್ರಶಸ್ತಿ ಘೋಷಣೆಯಾಯಿತು.
ಅಕ್ಟೋಬರ್ ೧೫ : ಜೆಎಂಬಿ ಸಂಚು
ಜಮಾತ್ ಉಲ್-ಮಜಾಹಿದೀನ್ ಬಾಂಗ್ಲಾ ದೇಶ್ (ಜೆಎಂಬಿ) ಉಗ್ರ ಸಂಘಟನೆಯು ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿದ್ದು, ಅದು ಭಾರತದಾದ್ಯಂತ ತನ್ನ ಬೇರನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ ಎಂಬ ಆಘತಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಹಿರಂಗ ಪಡಿಸಿದೆ. ಬೆಂಗಳೂರಿನಲ್ಲೂ ೨೨ ಅಡಗುತಾಣಗಳನ್ನು ಸ್ಥಾಪಿಸಿರುವ ಶಂಕೆಯೂ ಕೂಡ ಈ ಸಂದರ್ಭದಲ್ಲಿ ಹೊರಬಿತ್ತು.
ಅಕ್ಟೋಬರ್ ೧೮ : ಸುಪ್ರಿಂ ಗೆ ನ್ಯಾ| ಎಸ್ ಎ ಬೋಬ್ಡೆ ಸಿಜೆಐ
ರಂಜನ್ ಗೊಗೋಯ್ ನಿವೃತ್ತಿಯ ನಂತರ ಸುಪ್ರಿಂ ಕೋರ್ಟಿನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ| ಎಸ್ ಎ ಬೋಬ್ಡೆ ಹೆಸರನ್ನು ಶಿಫಾರಸ್ಸು ಮಾಡಲಾಯಿತು.
ಅಕ್ಟೋಬರ್ ೨೦ : ಪಿಒಕೆಯ ೩ ಉಗ್ರ ನೆಲೆ ಧ್ವಂಸ
ಸಹನೆಗೆ ಕೂಡ ಮಿತಿ ಇದೆ ಎನ್ನುವುದನ್ನು ಪಾಕಿಸ್ಥಾನಕ್ಕೆ ಭಾರತ ಮತ್ತೆ ತೋರಿಸಿತು. ಸತತವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ಥಾನಕ್ಕೆ ಪ್ರತಿಯಾಗಿ ಸೇನೆ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಬಳಿ ಇರುವ ತಾಂಗ್‌ಧರ್, ಕೇರನ್ ವಲಯದ ಆಚೆ ಇರುವ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ದಲ್ಲಿ ಸಕ್ರಿಯುವಾಗಿರುವ ಲಷ್ಕರ್ ಎ ತಯ್ಯಬಾ, ಹಿಬ್ಜುಲ್ ಮುಜಾಹಿದಿನ್ ಉಗ್ರ ಸಂಘಟನೆಗಳಿಗೆ ಸೇರಿದ ಮೂರು ಶಿಬಿರಗಳನ್ನು ನಾಶಗೊಳಿಸಿತು. ಈ ಕಾರ್ಯಾಚರಣೆಯಲ್ಲಿ ಆರರಿಂದ ಹತ್ತು ಪಾಕಿಸ್ಥಾನಿ ಸೈನಿಕರು ಹತರಾಗಿದ್ದಾರೆ ಎಂದು ಭೂಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ತಿಳಿಸಿದರು.
ಅಕ್ಟೋಬರ್ ೨೧ : ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ | ಜನಜೀವನ ಅಸ್ಥವ್ಯಸ್ಥ
ಉತ್ತರ ಕರ್ನಾಟಕ ಹಾಗೂ ಮಲೆನಾಡು ಮತ್ತೆ ಭಾರಿ ಮಳೇ ಆರ್ಭಟಕ್ಕೆ ಎದುರಾಯಿತು. ಮುಂಗಾರು ಬಳಿಕ ಹಿಂಗಾರು ಮಳೆ ಅಬ್ಬರ ಜೋರಾಗಿತ್ತು. ಕೃಷ್ಣಾ, ಮಲಪ್ರಭಾ, ಘಟಾಪ್ರಭಾ, ವರದಾ ನದಿಗಳನ್ನೊಳಗೊಂಡು ಹಳ್ಳ ಕೊಳ್ಳಗಳು ಸೇರಿ ಅಪಾಯದ ಮಟ್ಟವನ್ನು ಮೀರಿ ಹರಿದವು. ಏಳು ಮಂದಿ ಮೃತ ಪಟ್ಟರು. ಅಪಾರ ಪ್ರಮಾಣದ ಹಾನಿಯುಂಟಾಯಿತು.
ಅಕ್ಟೋಬರ್ ೨೨ : ಚಿದಂಬರಂ ಗೆ ಜಾಮೀನು
ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಇತ್ತೀಚೆಗೆ ಸಿಬಿಐಯಿಂದ ಬಂಧನಕ್ಕೀಡಾಗಿದ್ದ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರಿಗೆ ಸುಪ್ರಿಂ ಕೋರ್ಟು ಜಾಮೀನು ನೀಡಿತು. ಇಬ್ಬರು ವ್ಯಕ್ತಿಗಳಿಂದ ಖಚಿತತೆ (ಶ್ಯೂರಿಟಿ) ಹಾಗೂ ೧ ಲಕ್ಷ ಬಾಂಡ್ ಪಡೆದು ಜಾಮೀನು ನೀಡುವಂತೆ ಸುಪ್ರಿಂ ಕೋರ್ಟ್ ಆದೇಶಿಸಿತು.
ಅಕ್ಟೋಬರ್ ೨೮: ೬೪ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಎಲೆಮರೆಯ ಕಾಯಿಗಳಂತಿರುವ ಹಲವು ಸಾಧಕರು ೨೦೧೯ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದರು. ಪ್ರಶಸ್ತಿಗೆ ಒಟ್ಟು ೧೫೦೦ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಸಚಿವ ಸಿ.ಟಿ ರವಿ ನೇತೃತ್ವದ ಆಯ್ಕೆ ಸಮಿತಿ ೬೪ ಗಣ್ಯರನ್ನು ಆಯ್ಕೆ ಮಾಡಿತು. ಇದರಲ್ಲಿ ಕರಾವಳಿ ಕರ್ನಾಟಕದ ಎಂಟು ಮಂದಿಯೂ ಇದ್ದಾರೆ.
ಅಕ್ಟೋಬರ್ ೩೧ : ಪಠ್ಯದಿಂದ ಟಿಪ್ಪು ಹೊರಕ್ಕೆ...?!
ಪಠ್ಯಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಸಂಬಂಧಿತ ಇತಿಹಾಸದ ಅಧ್ಯಾಯಗಳನ್ನು ತೆಗೆದು ಹಾಖುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಅಷ್ಟಲ್ಲದೇ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವುದಿಲ್ಲ. ಮತ್ತು ಶಾಲಾ ಪಠ್ಯ ಪುಸ್ತಕಗಳಲ್ಲಿನ ಅಧ್ಯಾಯವನ್ನು ತೆಗೆದು ಹಾಕಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದರು.
ನವೆಂಬರ್ ೧ : ಕನ್ನಡ ಧ್ವಜ ಹಾರಾಟಕ್ಕೆ ನಿರ್ಬಂಧ
ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟç ಧ್ವಜ ಹಾರಿಸಬೇಕೆಂದು ಮತ್ತು ಕನ್ನಡ ಧ್ವಜ ಹಾರಿಸುವ ಬಗ್ಗೆ ಯಾವುದೇ ಚಕಾರೆತ್ತದೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿತು.
ನವೆಂಬರ್ ೨ : ವೈಜನಾಥ್ ಪಾಟಿಲ್ ಕೊನೆಯುಸಿರು
ಅತ್ಯಂತ ಹಿಂದುಳಿದ ಹೈದ್ರಾಬಾದ್ ಕರ್ನಾಟಕ (ಈಗಿನ ಕಲ್ಯಾಣ ಕರ್ನಾಟಕ)ಕ್ಕೆ ಸಂವಿಧಾನದ ೩೭೧(ಜೆ) ವಿಧಿ ಅನ್ವಯ ಮಾಡುವ ಸಲುವಾಗಿ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟ ಹೋರಾಟಗಾರ, ಮಾಜಿ ಸಚಿವ ವೈಜನಾಥ್ ಪಾಟೀಲ್(೮೨) ಬೆಂಗಳೂರಿನಲ್ಲಿ ವಿಧಿವಶರಾದರು.
ನವೆಂಬರ್ ೩ : ಪ್ರಯತ್ನ ಮುಂದುವರೆಸುತ್ತೇವೆ : ಕೆ. ಶಿವನ್
ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಲ್ಲಿ ವಿಫಲವಾದ ಇಸ್ರೋ ಮತ್ತೊಮ್ಮೆ ತಪ್ಪುಗಳನ್ನು ಪರಿಶೀಲಿಸಿ ಪ್ರಯತ್ನ ನಡೆಸುತ್ತೇವೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದರು.
ನವೆಂಬರ್ ೪ : ದಿಲ್ಲಿ ಮಾಲಿನ್ಯ ವಿಪರೀತ
ಭೀಕರ ವಾಯುಮಾಲಿನ್ಯದಿಂದ ತತ್ತರಿಸಿ ಹೋಗಿರುವ ರಾಷ್ಟç ರಾಜದಾನಿಯಲ್ಲಿ ಮಾಲಿನ್ಯ ವಿಪರೀತಕ್ಕೆ ಏರಿತು. ಹೊಗೆ ಮಿಶ್ರಿತ ದಟ್ಟ ಮಂಜಿನಿಂದಾಗಿ ರಾಜ್ಯಾಡಳಿತ ಶಾಲಾ ಕಾಲೇಜಿಗೆ ರಜೆ ಘೋಷಿಸಿತು.
ನವೆಂಬರ್ ೫ : ಆರ್‌ಸಿಇಪಿಗೆ ಹೊರನೆಡೆದ ಭಾರತ
ಹಾಲು ಉತ್ಪಾದಕರು, ರೇಷ್ಮೆ, ಅಡಕೆ, ಸೇರಿದಂತೆ ವಿವಿಧ ಬೆಳೆಗಾರರು ಹಾಗು ಸಣ್ಣ ಉದ್ಯಮಿಗಳನ್ನು ಆತಂಕಕ್ಕೆ ದೂಡಿದ್ದ ೧೦ ಆಸಿಯನ್ ದೇಶಗಳು ಹಾಗೂ ಇತರೆ ೬ ದೇಶಗಳ ನಡುವಿನ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್‌ಸಿಇಪಿ) ಒಪ್ಪಂದದಿAದ ಭಾರತ ಕೊನೆಯ ಕ್ಷಣದಲ್ಲಿ ಹಿಂದೆ ಸರಿಯಿತು.
ನವೆಂಬರ್ ೭ : ಕೆಪಿಎಲ್‌ನಲ್ಲಿ ಫಿಕ್ಸಿಂಗ್ ಹಗರಣ
ಕೆಪಿಎಲ್ ಟಿ೨೦ ಪಂದ್ಯಾವಳಿಗಳಲ್ಲಿ ಮ್ಯಾಚ್ ಮತ್ತು ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣಗಳು ಬೆಳಕಿಗೆ ಬಂದವು. ಈ ಸಂಬAಧ ಕೆಲವು ಆಟಗಾರರನ್ನು, ತಂಡದ ಮಾಲೀಕರನ್ನು ಪೋಲಿಸರು ಬಂಧಿಸಿದರು.
ನವೆಂಬರ್ ೭: ಗಾಂಧಿ ಫ್ಯಾಮಿಲಿಗೆ ಇಲ್ಲ ಎಸ್‌ಪಿಜಿ ಭದ್ರತೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಹಾಗೂ ರಾಹುಲ್ ಗಾಂಧಿ, ಪ್ರೀಯಾಂಕ ಗಾಂಧಿ ವಾದ್ರಾ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತಾ ಪಡೆ ಎಸ್‌ಪಿಜಿಯನ್ನು ಹಿಂಪಡೆದು, ಝಡ್+ ಭದ್ರತೆ ನೀಡಿದ ಸರ್ಕಾರ.
ನವೆಂಬರ್ ೯ : ಅಯೋಧ್ಯೆ ವಿವಾದ ಅಂತ್ಯ
ದಶಕಗಳಿಂದ ರಾಮ ಜನ್ಮಭೂಮಿ ಎಂದು ಹೇಳಲಾಗುವ ಅಯೊಧ್ಯೆಯಲ್ಲಿ ವಿವಾದಕ್ಕೀಡಾಗಿದ್ದ ೨.೭೭ ಎಕರೆ ಭೂಮಿ ಹಿಂದೂಗಳಿಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿತು. ಮಸೀದಿ ನಿರ್ಮಾನಕ್ಕೆ ಪ್ರತ್ಯೆಕ ೫ ಎಕರೆ ಜಾಗವನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿತು.
ನವೆಂಬರ್ ೧೦ : ಶೇಷನ್ ಅಸ್ತಂಗತ
ಭಾರತೀಯ ಚುನಾವಣಾ ಪ್ರಕ್ರಿಯೆಗಳ ಸುಧಾರಕ ಚುನಾವಣಾಧಿಕಾರಿ ಟಿ ಎನ್ ಶೇಷನ್(೮೭) ಕೊನೆಯುಸಿರೆಳೆದರು.
ನವೆಂಬರ್ ೧೨ : ಮಹಾರಾಷ್ಟçಕ್ಕೆ ರಾಷ್ಟçಪತಿ ಆಳ್ವಿಕೆ
ಮಹಾರಾಷ್ಟçದಲ್ಲಿ ಸರ್ಕಾರ ರಚನೆ ಕುರಿತಂತೆ ನಡೆದ ಹೈಡ್ರಾಮ ಅಂತ್ಯ ಕಂಡಿತು. ರಾಜ್ಯದಲ್ಲಿ ಯಾವ ಪಕ್ಷಗಳಿಗೂ ಅಧಿಕಾರ ನಡೆಸುವ ಸಾಮರ್ಥ್ಯವಿಲ್ಲವೆಂದು ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮಾಡಿದ ಶಿಫಾರಸ್ಸನ್ನು ರಾಷ್ಟಪತಿ ಅಂಗೀಕರಿಸಿದರು. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಆರಂಭವಾಯಿತು.
ನವೆಂಬರ್ ೧೩ : ರಾಜ್ಯದ ೧೭ ಅನರ್ಹ ಶಾಸಕರು ಸ್ಪರ್ಧಿಸಲು ಅರ್ಹ
ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಕಾಂಗ್ರೇಸ್, ಜೆಡಿಎಸ್ ವಿರುದ್ಧ ಬಂದೆದ್ದ ೧೭ ಶಾಸಕರ ಅನರ್ಹತೆಯ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ರಾಜ್ಯ ವಿಧಾನ ಸಬೆಯಿಂದ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರ ತಪ್ಪು ಎಂದು ಸುಪ್ರೀಂ ಕೋರ್ಟ್ ಘೋಷಿಸಿತು. ಮಾತ್ರವಲ್ಲದೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹ ಎಂದು ಮಾನ್ಯ ಮಾಡಿತು.
ನವೆಂಬರ್ ೧೮ : ತಾಂತ್ರಿಕ ಮೇಳ ಉದ್ಘಾಟನೆ
ಮೂರು ದಿನಗಳ ಬೆಂಗಳೂರು ತಾಂತ್ರಿಕ ಮೇಳ’ವನ್ನು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಉದ್ಘಾಟಿಸಿದರು. ಉಪ ಮುಖ್ಯಮಂತ್ರಿ ಹಾಗೂ ಐಟಿಬಿಟಿ ಸಚಿವ ಡಾ| ಅಶ್ವತ್ ನಾರಾಯನ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಮ್ ವಿಜಯ ಭಾಸ್ಕರ್, ಬಯೋಕಾನ್ ಅಧ್ಯಕ್ಷೆ ಕಿರಣ ಮಂಜುದಾರ್ ಮತ್ತಿತರರು ಉಪಸ್ಥಿತರಿದ್ದರು.
ನವೆಂಬರ್ ೧೯ : ಕಳಸಾ-ಬಂಡೂರಿ ಯೋಜನೆಗೆ ಜಾವೇಡ್ಕರ್ ಭರವಸೆ
ಕರ್ನಾಟಕಕ್ಕೆ ಕಳಸಾ-ಬಂಡೂರಿ(ಮಹಾದಾಯಿ) ಯೋಜನೆ ಕೈಗೆತ್ತಿಕೊಳ್ಳಲು ತಾನೇ ನೀಡಿದ್ದ ಅನುಮೋದನೆಯನ್ನು ಮರುಪರಿಶೀಲನೆಗೆ ಕೇಂದ್ರ ಸರ್ಕಾರ ನಿರ್ಧರಿಸಿತು. ಈ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿಗೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್ ಪತ್ರ ಬರೆದರು. ಕಳಸಾ ಬಂಡೂರಿ ಯೋಜನೆಗೆ ಪರಿಸರ ಅನುಮೋದನೆ ನೀಡಿದ ನಿರ್ಧಾರವನ್ನು ಪರಿಗಣನೆಗೆ ತೆಗೆದುಕೊಂಡು ಸಮಿತಿಯನ್ನು ರಚನೆ ಮಾಡುತ್ತೇವೆ ಎಂದು ಜಾವೇಡ್ಕರ್ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ಗೆ ಭರವಸೆ ನೀಡಿದರು.
ನವೆಂಬರ್ ೨೦ : ಅಮಿತ್ ಶಾ ಎನ್‌ಆರ್‌ಸಿ ಘೋಷಣೆ
ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ನಡೆಸಲಾದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ( ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜ್ಹನ್- ಎನ್‌ಆರ್‌ಸಿ) ಯನ್ನು ದೆಶದಾದ್ಯಂತ ವಿಸ್ತರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಫೋಸಿದರು.
ನವೆಂಬರ್ ೨೨ : ಕಲಬುರುಗಿಯ ನೂತನ ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಚಾಲನೆ
೨೦೦೮ರಲ್ಲಿ ಅಡಿಗಲ್ಲು ಹಾಕಿದ ೭೪೨ ಎಕರೆಯಷ್ಟು ವಿಸ್ತಾರವಾಗಿರುವ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಚಾಲನೆ ನೀಡಿದರು. ರಾಜ್ಯದಲ್ಲಿ ೬ ಸರ್ಕಾರಿ ವಿಮಾನ ನಿಲ್ದಾಣವನ್ನೊಳಗೊಂಡು ಖಾಸಗಿ ವಿಮಾನ ನಿಲ್ದಾಣವನ್ನು ಸೇರಿ ಏಳು ವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತಿದೆ.
ನವೆಂಬರ್ ೨೪ : ಫಿಟ್ ಇಂಡಿಯಾ ಶಾಲೆ ಯೋಜನೆಗೆ ಮೋದಿ ಚಾಲನೆ
ದೇಶದ ಜನರು ಉತ್ತಮ ಆರೋಗ್ಯ ಹೊಂದಿರಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ್ದ ಫಿಟ್ ಇಂಡಿಯಾ ಯೋಜನೆಯನ್ನು ಶಾಲೆಗಳಿಗೂ ವಿಸ್ತರಿಸಲಾಯಿತು. ಶಾಲಾ ಮಕ್ಕಳಿಗೆ ‘ಫಿಟ್ ಇಂಡಿಯಾ ಶಾಲೆ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಚಾಲನೆ ನೀಡಿದರು.
ನವೆಂಬರ್ ೨೬ : ಮಹಾರಾಷ್ಟ್ರ ಸರ್ಕಾರ ಪತನ
ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದ ಮಹಾರಾಷ್ಟç ರಾಜಕೀಯ ಅಚ್ಚರಿಯ ತಿರುವು ಪಡೆದುಕೊಂಡಿತು. ಅಧಕಾರಕ್ಕೆ ಬಂದ ೮೦ ತಾಸುಗಳಲ್ಲೇ ಮುಖ್ಯ ಮಂತ್ರಿ ಸ್ಥಾನಕ್ಕೆ ಎನ್‌ಸಿಪಿ ಬಂಡಾಯ ನಾಯಕ ಅಜಿತ್ ಪವಾರ್ ರಾಜಿನಾಮೆ ಸಲ್ಲಿಸಿದರು.
ನವೆಂಬರ್ ೨೮ : ಠಾಕ್ರೆ ಮಹಾರಾಷ್ಟçದ ಸಿಎಂ
ಮಹಾರಾಷ್ಟçದ ೧೮ನೇ ಮುಖ್ಯಮಂತ್ರಿಯಾಗಿ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸಿದರು.
ನವೆಂಬರ್ ೨೯ : ಹೈದರಾಬಾದ್ : ಪೈಶಾಚಿಕ ಸಾಮೂಹಿಕ ಅತ್ಯಾಚಾರ
ಹೈದರಾಬಾದ್ ಬಳಿಯ ಶಾದ್‌ನಗರದಲ್ಲಿ ಪಶುವೈದ್ಯಯ ಮೇಲೆ ಸಾಮೂಹಿಕ ಅತ್ಯಾಚಾರ ನೆಡೆಸಿ. ಪೆಟ್ರೋಲ್ ಸುರಿದು ಸುಟ್ಟು ಹಾಕಲಾಯಿತು.
ನವೆಂಬರ್ ೩೦ : ಜಿಡಿಪಿ ಕುಸಿತ
೨೦೧೯ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಜಿಡಿಪಿ ಕೇವಲ ಶೇ. ೪.೫ರಷ್ಟು ನಿರಾಶದಾಯಕ ಪ್ರಮಾಣದ ಬೆಳವಣಿಗೆ ಕಂಡಿತು. ಪ್ರಸಕ್ತ ವರ್ಷದ ಮೊದಲ ತ್ರೆöÊಮಾಸಿಕಕ್ಕೆ ಹೋಲಿಸಿದರೆ ಶೇ. ೨.೬ರಷ್ಟು ಭಾರಿ ಇಳಿಕೆಯಾಗಿತ್ತು. ಈ ಬೆಳವಣಿಗೆ ಪ್ರಮಾಣವು ಕಳೆದ ಆರು ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಪ್ರಮಾಣವಾಗಿತ್ತು.
ಡಿಸೆಂಬರ್ ೧ : ಗಗನಕ್ಕೇರಿದ ಈರುಳ್ಳಿ ಬೆಲೆ
ಹವಾಮಾನ ವೈಪರಿತ್ಯದ ಪರಿಣಾಮವಾಗಿ ಈರುಳ್ಳಿ ಬೆಲೆ ಮಹಾರಾಷ್ಟçದ ಲಾಸಲಗಾಂವ್ ಮಾರುಕಟ್ಟೆಯಲ್ಲಿ ೭೨ ವರ್ಷಗಳಲ್ಲೇ ದಾಖಲೆ ಮಟ್ಟಕ್ಕೇರಿದೆ. ಡಿಸೆಂಬರ್‌ನಲ್ಲಿ ಇದು ಕೇಜಿಗೆ ೨೦೦ರೂ ತನಕವೂ ಹೋಯಿತು.
ಡಿಸೆಂಬರ್ ೨ : ರ‍್ಟೆಲ್, ವಡಾಫೋನ್, ಐಡಿಯಾ ದುಬಾರಿ
ಕಳೆದ ೫ ವರ್ಷಗಳಿಂದ ಅಗ್ಗದ ಬೆಲೆಗೆ ಇಂಟರ್ನೆಟ್ ಹಾಗೂ ಉಚಿತ ಕರೆ ಸೌಲಭ್ಯ ಇದಗಿಸುತ್ತಿದ್ದ ರ‍್ಟೆಲ್, ವಡಾಫೋನ್, ಐಡಿಯಾ ಕಂಪೆನಿಗಳು ತಮ್ಮ ಪ್ರೀಪೇಡ್ ಸೇವೆಯ ವಿವಿಧ ಪ್ಯಾಕ್‌ಗಳ ದರವನ್ನು ಶೇ. ೪೭ರವರೆಗೂ ಏರಿಕೆ ಮಾಡಿದವು.
ಡಿಸೆಂಬರ್ ೪ : ಎಚ್‌ಸ್ವಿ ಸಮ್ಮೇಳನಾಧ್ಯಕ್ಷ
ಕಲಬುರಗಿಯಲ್ಲಿ ೨೦೨೦ ಫೆ.೫ ರಿಂದ ೭ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಲನದ ಅಧ್ಯಕ್ಷರಾಗಿ ಕನ್ನಡ ಸಾರಸ್ವತ ಲೋಕದ ಮೇರು ಕವಿಗಳಲ್ಲೊಬ್ಬರಾದ ಡಾ| ಎಚ್ ಎಸ್ ವೆಂಕಟೇಶ ಮೂರ್ತಿ ಆಯ್ಕೆಯಾದರು.
ಡಿಸೆಂಬರ್ ೬ : ಹೈದ್ರಾಬಾದ್ ಅತ್ಯಾಚಾರ ಪ್ರಕರಣದ ಅತ್ಯಾಚಾರಿಗಳ ಶೂಟೌಟ್
ಘಟನಾ ಸ್ಥಳಕ್ಕೆ ಮರು ಪರಿಶೀಲನೆಗೆಂದು ಆರೋಪಿಗಳನ್ನು ಕರೆದುಕೊಂಡು ಬಂದ ವೇಳೆ ಪೋಲಿಸರಿಂದ ತಪ್ಪಿಸಿಕೊಳ್ಳಲೆತ್ನಿಸಿದ ನಾಲ್ವರೂ ಅತ್ಯಾಚಾರಿಗಳನ್ನು ಹುಬ್ಬಳ್ಳಿ ಮೂಲದ ಪೋಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡ ಶೂಟೌಟ್ ಮಾಡಿ ಕೊಂದರು. ಈ ಘಟನೆ ದೇಶದಾದ್ಯಂತ ಮೆಚ್ಚುಗೆ ಪಾತ್ರವಾಯಿತು. ಮತ್ತು ವಿರೋಧಕ್ಕೂ ಗ್ರಾಸವಾಯಿತು.
ಡಿಸೆಂಬರ್ ೧೧ : ಪೌರತ್ವ ಮಸೂದೆಯ ವಿರುದ್ಧ ದೇಶದಾದ್ಯಂತ ಹಿಂಸಾಚಾರ
ಪೌರತ್ವ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಯಿತು. ಈಶಾನ್ಯ ರಾಜ್ಯಗಳಲ್ಲಿ ಭಾರಿ ಆಕ್ರೋಶ ಭುಗಿಲೆದ್ದಿತು. ಅದು ದೇಶದೆಲ್ಲೆಡೆ ಪಸರಿಸಿತು.
ಡಿಸೆಂಬರ್ ೧೭ : ಪಾಕಿಸ್ಥಾನದ ಮಾಜಿ ಸರ್ವಾಧಿಕಾರಿಗೆ ಗಲ್ಲು
ದೇಶದ್ರೋಹ ಪ್ರಕರಣದಲ್ಲಿ ಪಾಕಿಸ್ಥಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಶ್ರಫ್(೭೬)ಗೆ ಇಸ್ಲಾಮಾಬಾದ್‌ನ ವಿಶೇಷ ಕೋರ್ಟ್ ಆದೇಶ ಹೊರಡಿಸಿತು. ಈ ಮೂಲಕ ಪಾಕಿಸ್ಥಾನದ ಇತಿಹಾಸದಲ್ಲೇ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ತುತ್ತಾದ ಮೊದಲ ನಿವೃತ್ತ ಸೇನಾಧಿಕಾರಿ ಎಂದು ಕುಖ್ಯಾತರಾದರು.
ಡಿಸೆಂಬರ್ ೧೯ : ಪೌರತ್ವ ಕಾಯ್ದೆ : ಮಂಗಳೂರು ಉದ್ವಿಗ್ನ
ಪೌರತ್ವ ಕಾಯ್ದೆಯ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ತೀವ್ರ ಹಿಂಸಾರೂಪಕ್ಕೆ ಪ್ರತಿಭಟನೆ ತಿರುಗಿತು. ಪ್ರತಿಭಟನಾಕಾರರ ಆಕ್ರೋಶದಿಂದ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಭಾರಿ ಹಾನಿಯುಂಟಾಯಿತು. ಹಿಂಸಾಚಾರವನ್ನು ನಿರ್ವಹಿಸುವುದಕ್ಕಾಗದೆ ಪೋಲಿಸರು ಗೋಲಿಬಾರ್ ಮಾಡಿದರು. ಗೋಲಿಬಾರ್‌ಗೆ ಇಬ್ಬರು ಯುವಕರು ಬಲಿಯಾದರು.
ಡಿಸೆಂಬರ್ ೨೦ : ಉನ್ನಾವ್ ರೇಪಿಸ್ಟ್ಗೆ ಜೀವಾವಧಿ ಜೈಲು
ಉನ್ನಾವ್ ಅತ್ಯಾಚಾರ ಪ್ರಕರಣದ ಅಪರಾಧಿ, ಉಚ್ಛಾಟಿತ ಬಿಜೆಪಿ ಶಾಶಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ದಿಲ್ಲಿಯ ತೀಸ್ ಹಜಾರಿಯಾ ಕೋರ್ಟ್ ಈ ತೀರ್ಪನ್ನು ನೀಡಿತು. ಮಾತ್ರವಲ್ಲದೇ, ೨೫ ಲಕ್ಷ ರೂ ದಂಡವನ್ನು ವಿಧಿಸಿತು. ಒಂದು ವೇಳೆ ಕುಲದೀಪ್ ಆ ದಂಡವನ್ನು ನೀಡದಿದ್ದರೇ ಉತ್ತರ ಪ್ರದೇಶ ಸರ್ಕಾರವೇ ದಮಡ ವಿಧಿಸಬೇಕೆಂದು ಕೋರ್ಟ್ ಆದೇಶ ನೀಡಿತು.
ಡಿಸೆಂಬರ್ ೨೩ : ಝಾರ್ಖಂಡ್ ಬಿಜೆಪಿಗೆ ಸೋಲು
ಝಾರ್ಖಂಡ್‌ನಲ್ಲಿ ಮೊದಲ ಪೂರ್ಣಾವಧಿ ಸರ್ಕಾರ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬಿಜೆಪಿಗೆ ಸೋಲು. ಜೆಎಂಎA-ಕಾAಗ್ರೆಸ್ ಮೈತ್ರಿಗೆ ಜಯ.
ಡಿಸೆಂಬರ್ ೨೪ : ಎನ್‌ಆರ್‌ಪಿ ಗೆ ಕೇಂದ್ರ ಒಪ್ಪಿಗೆ
ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟಿçÃಯ ಪೌರತ್ವ ನೋಂದಣಿ(ಎನ್‌ಆರ್‌ಪಿ) ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲೇ ಕೇಂದ್ರ ಸಂಪುಟ ರಾಷ್ಟಿçÃಯ ಪೌರತ್ವ ನೋಂದಣಿ(ಎನ್‌ಆರ್‌ಪಿ) ಜಾರಿ ಮಾಡಲು ಒಪ್ಪಿಗೆ ನೀಡಿದೆ. ಎನ್‌ಆರ್‌ಪಿಗಾಗಿ ಬರೋಬ್ಬರಿ ೮೫೦೦ ಕೋ. ರೂ ವೆಚ್ಚಮಾಡಲು ಅನುಮೋದನೆ ನೀಡಿದೆ.
ಡಿಸೆಂಬರ್ ೨೬ : ಕುತೂಹಲ ಹುಟ್ಟಿಸಿದ ಸೂರ್ಯಗ್ರಹಣ
ಅಪರೂಪದಲ್ಲೇ ಅಪರೂಪವೆನ್ನಿಸಿದ ಸೂರ್ಯಗ್ರಹಣಕ್ಕೆ ದೇಶವೇ ಸಾಕ್ಷಿಯಾಯಿತು. ಕರ್ನಾಟಕವನ್ನೊಳಗೊಂಡು ದೇಶದಾದ್ಯಂತ ಸೂರ್ಯಗ್ರಹಣವನ್ನು ವೀಕ್ಷಿಸಿದ ಜನರು ಸಂತಸಪಟ್ಟರು.
ಡಿಸೆಂಬರ್ ೨೭ : ಪಾಕ್ ಮತ್ತೆ ಕದನ ವಿರಾಮ ಉಲ್ಲಂಘನೆ
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನ ನಡೆಸಿದ ಪಾಕಿಸ್ಥಾನ ಕದನ ವಿರಾಮ ಉಲ್ಲಂಘನೆಗೆ ದಿಟ್ಟ ಉತ್ತರ ನೀಡಿರುವ ಭಾರತೀಯ ಸೇನೆಯು ಪಾಕಿಸ್ಥಾನದ ನಾಲ್ವರು ಯೋಧರನ್ನು ಬಲಿ ಪಡೆದಿದೆ.
ಡಿಸೆಂಬರ್ ೨೭ : ಯೇಸು ಕ್ರಿಸ್ತನ ಪ್ರತಿಮೆ ವಿವಾದ
ರಾಮನಗರದ ಕಪಾಲಬೆಟ್ಟದಲ್ಲಿ ಬೃಹತ್ ಯೇಸು ಪ್ರತಿಮೆಯನ್ನು ನಿರ್ಮಾಣಕ್ಕೆ ಮುಂದಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ನಡೆಗೆ ಬಿಜೆಪಿಯಿಂದ ತೀವ್ರ ಖಂಡನೆ ವ್ಯಕ್ತ.
ಡಿಸೆಂಬರ್ ೨೯ : ಪೇಜಾವರ ಶ್ರೀ ಕೃಷ್ಟನ ಪಾದ ಸ್ಪರ್ಶ
ಉಡುಪಿ ಅಷ್ಠ ಮಠಗಳಲ್ಲೊಂದಾದ ಪೇಜಾವರ ಮಠದ ಹಿರಿಯ ಸ್ವಾಮೀಜಿ ವಿಶ್ವೇಶ ತೀಥ ಶ್ರೀ ಪಾದಂಗಳವರು(೮೮) ಕೃಷ್ಣನ ಪಾದಕ್ಕಾದರು. ಅವರ ಬಯಕೆಯಂತೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಮಾಧ್ವ ಪರಂಪರೆಯ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.
ಡಿಸೆಂಬರ್ ೩೦ : ಮಹಾರಾಷ್ಟ್ರ ಸಂಪುಟ ವಿಸ್ತಾರ
ಉದ್ಧವ್ ಠಾಕ್ರೆ ನೇತ್ರತ್ವದ ಸರ್ಕಾರದ ಸಚಿವ ಸಂಪುಟ ಪೂರ್ಣಗೊಳಿಸಲಾಯಿತು. ಉದ್ಧವ್ ಠಾಕ್ರೆ ಪುತ್ರ ಆದಿತ್ರ ಠಾಕ್ರೆ, ಅಜಿತ್ ಪವಾರ್ ಸೇರಿದಂತೆ ೩೬ ಮಂದಿ ಪ್ರಮಾಣ ವಚನ ಸ್ವೀಕರಿಸಿದರು.
ಡಿಸೆಂಬರ್ ೩೧ : ಜ| ನರವಾನೆ ಅಧಿಕಾರ ಸ್ವೀಕಾರ
ಭೂಸೇನೆಯ ೨೮ನೇ ಮುಖ್ಯಸ್ಥರಾಗಿ ಜ| ಮನೋಜ್ ಮುಕುಂದ್ ನರವಾನೆ ಅಧಿಕಾರ ಸ್ವೀಕರಿಸಿದರು.

ಸಂಗ್ರಹ : ಶ್ರೀರಾಜ್ ಎಸ್. ಆಚಾರ್ಯ, ವಕ್ವಾಡಿ
No comments:
Post a Comment