Sunday, March 29, 2020

ಇದ್ದು ಬಿಡುವೆ...!


ಅಯ್ಯೋ..
ಬೆಂಕಿ ಧಗಧಗಿಸುತ್ತಿದೆ
ಅದ್ಯಾರ ಕೇಕೆಯೋ,
ಸುಟ್ಟು ಹೋದೀತೆ ಜೀವ..!? 
ಮುಷ್ಟಿಯಷ್ಟೇಯಿದ್ದ 
ಹೃದಯದಲ್ಲಿ ಖಾಲಿ ಖಾಲಿ ಮೌನ..!
ಅಯ್ಯೋ, 
ಕಲಿಭೈರವಿಯ ಹೆಜ್ಜೆಯನ್ನಿಟ್ಟು
ಬೆಂಕಿ ಕುಣಿಯುತ್ತಿದೆ...!
ಹಸಿ ಕನಸುಗಳು 
ಕರಕಲಾಗುವ ಮುನ್ನ
ಹಿಡಿದಾಚೆಯೆಳೆದೊಗೆದಾದರೂ ಬಿಡಿ.
ಅಲ್ಲೆಲ್ಲೋ 
ಕೊಚ್ಚೆಯಲ್ಲೋ, ಕಲ್ಲಿನಲ್ಲೋ, ಮಣ್ಣಿನಲ್ಲೋ ಬೆಳೆದು ಬಿಡುವೆ..!

ಕಾಣದ ಸುಖ
ಕಾಣುವುದಾದರೆಂದು..!?
ಅದ್ಯಾವ ಹೊಲೆ
ಈ ಜೀವಕ್ಕೆ...!?
ಇನ್ನೇನನ್ನೂ ಬಯಸುವುದಿಲ್ಲ
ಬದುಕಲಾದರೂ ಬಿಡಿ..!
ಎಲ್ಲೋ ಇದ್ದು ಬಿಡುವೆ. 
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)




Photo : Inchu Photography,
Internet

No comments:

Post a Comment