Wednesday, February 12, 2020

ವಿಷದ ಪಥ (ಸಣ್ಣ ಕಥೆ)



ಕೋರ್ಟ್ ನಲ್ಲಿ  ಕೇಸ್ ಇತ್ತು ಮುಗಿಸಿ ಆಫೀಸ್ನಲ್ಲಿ ಕೂತಿದ್ದೆ. ಗಂಟೆ ಸುಮಾರು ಹನ್ನೊಂದು ಮುಕ್ಕಾಲಾಗಿತ್ತು. ಮಳೆ ಸುರಿತಿತ್ತು ಬೆಚ್ಚಗೆ ಒಂದು ಟೀ ಕುಡಿಬೇಕು ಅನ್ಸ್ತು. ಆಫಿಸ್‌ನ ಹುಡ್ಗ ಮಹೇಶ್‌ನ ಹೆಸರು ಕೂಗಿ ಒಂದು ಟೀ ತಾರೋ ಅಂದೆ. ಅವ್ನನ್ನ ಕೋರ್ಟಿಗೆ ಫೈಲ್ ಬಿಟ್ಬಂದಿದ್ದೆ ತಗೊಂಡ್ ಬರೋದಕ್ಕೆ ಕಳ್ಸಿದ್ದು ನೆನಪೇ ಹೋಗಿತ್ತು. ಅಷ್ಟರಲ್ಲಿ ಕಾಲೇಜ್ ಫ್ರೆಂಡ್ ಅಪರ್ಣಾ ಆಪೀಸಿಗೆ ಬಂದ್ಲು. ಫಸ್ಟ್ ಟೈಮ್ ನೋಡ್ದಾಗ ಗೊತ್ತೆ ಆಗ್ಲಿಲ್ಲ. ನೋಡ್ದೆ ತುಂಬಾ ವರ್ಷಗಳೇ ಕಳೆದಿತ್ತು. ಬನ್ನಿ ಏನಾಗ್ಬೇಕಿತ್ತು ಅಂತ ಒಳಗೆ ಕರ‍್ದೆ. ಏನೋ ಇಷ್ಟೊಂದು ರೆಸ್ಪೆಕ್ಟು…? ನಾನ್ ಕಣೊ ಅಪರ್ಣಾ ಪಿಯುಸಿ ಫ್ರೆಂಡ್. ವಿದ್ಯಾಸಾಗರ ಪ್ರಿ ಯೂನಿರ‍್ಸಿಟಿ ಕಾಲೇಜ್‌ನ ೨೧೩ನೇ ಕ್ಲಾಸ್ ರೂಮ್ನಲ್ಲಿ ನಾನು ೩ನೇ ಬೆಂಚಲ್ಲಿ ಕರ‍್ತಿದ್ದೆ. ನೀನು ೨ನೇ ಬೆಂಚ್ನಲ್ಲಿ ಇರ‍್ತಿದ್ದೆ. ಆವಾಗಾವಾಗ ನನ್ನನ್ನ ಹಿಂತಿರುಗಿ ನೋಡ್ತಿದ್ದೆ, ನೆನ್ಪಿದೆಯಾ. ನನ್ ಫ್ರೆಂಡ್ಸೆಲ್ಲಾ ನೋಡೆ, ತೇಜಸ್ವಿ ನಿನ್ನನ್ನೇ ನೋಡ್ತಿದ್ದಾನೆ, ಅವ್ನಿಗೆ ನಿನ್ ಮೇಲೆ ಪಕ್ಕಾ ಲವ್ ಆಗಿದೆ ಕಣೆ ಅಂತಿದ್ದಿದ್ರು ಹ್ಹಹ್ಹಹ್ಹ.... ಅನ್ನೋದಕ್ಕೆ ಸ್ಟಾರ್ಟ್ ಮಾಡ್ಬಿಟ್ಲು. ನಾನೋ ಕೆನ್ನೆಗೆ ಬಲಗೈ ಹಸ್ತ ತಾಗಿಸಿ ಆಕೆಯನ್ನೇ ನೋಡ್ತಿದ್ದೆ. ಏನೋ ಇನ್ನು ಡೌಟಾ.. ಅಂದ್ಲು. ಡೌಟೆನಿಲ್ಲ..ಏನೆ ಇಷ್ಟೊಂದು ಚೇಂಜ್ ಆಗಿದ್ದೀಯಾ..? ಯಾವ್ ಕಡೆ ಇದ್ದೀಯಾ ಏನ್ ಕಥೆ, ಏನ್ ಮಾಡ್ತಿದ್ದೀಯಾ..? ಅಲ್ಲಾ... ಒಳ್ಗಡೆ ರ‍್ತಾ ರ‍್ತಾ ಹಳೆ ನೆನ್ಪೆಲ್ಲಾ ಮತ್ತೆ ನೆನ್ಪಿಸಿ ಬಿಟ್ಯಲ್ಲೆ... ಆ ದಿನಗಳೊ... ತುಂಬಾ ಚೆನ್ನಾಗಿತ್ತು. ನಾನ್ ನಿನ್ನನ್ನ ನೋಡ್ತಿದ್ದಿದ್ದು, ನಿನ್ನನ್ನ ನೋಡುವಾಗ ಹಿಂದೆ ನೀನು ಸರಿತಿದ್ದಿದ್ದು, ನಾನು ನಿನ್ನನ್ನ ಮತ್ತೆ ಮತ್ತೆ ನೋಡ್ತಿದ್ದಿದ್ದು, ಒಂದಿನ ಇಂಗ್ಲಿಷ್ ಕ್ಲಾಸ್ನಲ್ಲಿ ರೋಹಿಣಿ ಮೇಡಂ ನಮ್ಮಿಬ್ರನ್ನು ನೋಡಿ ಫುಲ್ ಕ್ಲಾಸ್ ನಿಲ್ಸಿದ್ದು, ಕ್ಲಾಸ್ನಲ್ಲಿರೊರೆಲ್ಲಾ ನಮ್ಮನ್ನ ನೋಡಿ ಟೀಸ್ ಮಡಿದ್ದು. ನಿನ್ನ ಫ್ರೆಂಡ್ಸಂತೂ ನಗೋಕು ಆಗ್ದೆ, ನಗ್ದೆ ಇರೋದಕ್ಕೂ ಆಗ್ದೆ ಕೊನೆಗೆ ಹೇಗೋ ಮಾಡಿ ನಗುವನ್ನು ಅದುಮಿ ಇಟ್ಕೊಂಡಿದ್ದು ..ಹ್ಹಹ್ಹ ಅವ್ರದ್ದು ಕಷ್ಟ ನೋಡ್ಬೇಕು.. ಚೆನ್ನಾಗಿತ್ತು ಕಣೆ ಆ ದಿನಗಳು...  ಇವಾಗ ನೋಡು ಕೋರ್ಟು, ಕೇಸು ಇವೇ ಎಲ್ಲ ರಗಳೆ. ಸ್ವಲ್ಪನೂ ಫ್ರೀ ಇರೋದೆ ಇಲ್ಲ. ಫ್ಯಾಮಿಲಿಗೂ ಟೈಮ್ ಕೊಡೊದಕ್ಕೆ ಆಗೋದಿಲ್ಲ ಕಣೆ, ಅಂತಂದೆ. ಅವಳ ಭಾವ ಆಗ ಬದಲಾಗಿತ್ತು. ನಾನು ಅದನ್ನ ಗಮನಿಸಿದ್ದೆ. ಫ್ಯಾಮಿಲಿನಾ..? ಯಾವಾಗ ಮದ್ವೆ ಆಯ್ತು ಅಂತ  ಕೇಳ್ದ್ಲು. ಮದ್ವೆ ಆಗಿ ಲಾಸ್ಟ್ ಜನವರಿ ಹನ್ನೆರಡಕ್ಕೆ ಆರು ವರ್ಷ ಕಳ್ದ್ಹೋಯ್ತು  ಅಂತಂದೆ. ಮದ್ವೆ ಆಗಿದಕ್ಕೆ ನನ್ ಹೆಂಡ್ತಿ ನಾಲ್ಕು ವರ್ಷಗಳ ಹಿಂದೆ ಒಂದು ಹೆಣ್ಣು ಪಾಪುನಾ ಗಿಫ್ಟ್ ಮಾಡಿದ್ದಾಳೆ. ಹೋ ಹೌದಾ...ಅಂತಂದ್ಲು. ಆಕೆಯ ದನಿ ಮೊದಲಿನಂತಿರಲಿಲ್ಲ.
ಏನಾಯ್ತು ಕೇಳ್ದೆ. ಏನಿಲ್ಲ ಅಂತ ನೀರಸ ಉತ್ತರ ಬಂತು.
ಯಾಕೆ ..? ಪರ‍್ವಾಗಿಲ್ಲ ಹೇಳು ಅಂದೆ.
ಏನಿಲ್ಲ ಕಣೊ.. ಬದುಕಿನಲ್ಲಿ ಬಯಸಿದ್ದು ಸಿಗ್ಬೇಕು ಅಂತಂದ್ರೆ ಯೋಗ ಮಾಡರ‍್ಬೇಕು ಅಂತಂದ್ಲು ಅಪರ್ಣಾ. ಆಕೆಯ ಮಾತುಗಳು ಬೇಸರದಿಂದಿತ್ತು. ಕೂತಲ್ಲಿಂದೆದ್ದೆ, ಅಪರ್ಣಾ ಕಮಾನ್, ವಾಟ್ ಹ್ಯಾಪೆಂಡ್ ... ಪ್ಲೀಸ್ ಟೆಲ್ ಮಿ ಅಂದೆ. ಆಕೆಯ ಕಣ್ಣುಗಳು ಚಿಕ್ಕದಾದವು. ನೀರು ತುಂಬಿಕೊಳ್ತು. ಅರೆ..ಏನೆ ಚಿಕ್ ಮಕ್ಕಳ ಹಾಗೆ ಮಾಡ್ತಿದ್ದಿಯಲಾ ಅಂತ ಟಿಶ್ಯೂ ಪೇಪರ್ ಅವಳ ಕೈಗಿತ್ತೆ. ಪ್ಲೀಸ್ ಟೆಲ್ ಮಿ.
ತೇಜು.., ನಿನ್ನನ್ನ ಇಷ್ಟಪಡ್ತಿದ್ದಿದ್ದೇನೆ ಕಣೊ.., ನಿನ್ನನ್ನ ಕಾಂಟ್ಯಾಕ್ಟ್ ಮಾಡೋದಕ್ಕೆ ಎಷ್ಟು ಕಷ್ಟ ಪಟ್ಟಿದ್ದೀನಿ ಗೊತ್ತಾ ನಿನಗೆ. ಅವಳು ನನ್ನನ್ನ ತುಂಬಾ ಇಷ್ಟ ಪಡುತ್ತಿರುವುದು ಆಕೆಯ ಮಾತುಗಳು ಹೇಳುತ್ತಿತ್ತು.
ಅಪರ್ಣಾ ಯೂ ಆರ್ ಟೂ ಲೇಟ್ ಅಂತಂದೆ...
ಎಸ್ ತೇಜು..., ಐ ಅಮ್ ಅನ್ಲಕ್ಕಿ ಕಣೊ...
ನೋ.., ಡೋಂಟ್ ಸೆ ಲೈಕ್ ದ್ಯಾಟ್.., ನೀನು ಹೇಳ್ಬೇಕಿತ್ತು ‘ತೇಜು ನಾನು ನಿನ್ನನ್ನ ಇಷ್ಟಪಡ್ತಿದ್ದೀನಿ’ ಅಂತ.
ಇವಾಗ ಏನ್ ಮಾಡೋದಕ್ಕಾಗುತ್ತೆ.., ನನ್ಗಿವಾಗ ಹೆಂಡ್ತಿ ಇದ್ದಾಳೆ, ಎರಡು ವರ್ಷದ ಮಗು ಇದೆ.  ಸ್ವಾರಿ ಅಪರ್ಣಾ..
ಸ್ವಾರಿ ಯಾಕ್ ಕೇಳ್ತೀಯಾ..?
ಪಿಯುಸಿ.ಯಲ್ಲಿ ನೀನು ನನ್ನನ್ನ ಇಷ್ಟಪಡ್ತಿದ್ದಿದ್ದು ಹೌದು ತಾನೆ..?
ಹು..ಅದೇನೋ ಹೌದು..ಆದ್ರೆ ಇವಾಗ ಅದು ಮುಗ್ದ್ಹೋಗಿರೋ ಕಥೆ ಅಲ್ವಾ…?ಅಂತಂದೆ.
ಹೋ.., ಹೌದಾ..? ನಿನ್ಗೂ ಇಷ್ಟಪಡ್ತಿರೋದನ್ನ ಹೇಳೋಕಾಗಿಲ್ವಾ..? ‘ಅಪರ್ಣಾ ನಾನು ನಿನ್ನನ್ನ ಇಷ್ಟ ಪಡ್ತಿದ್ದೀನಿ’ ಅಂತ.
ಆ ಧೈರ್ಯ.. ನನ್ಗರ‍್ಲಿಲ್ವೆ...
ಏನೋ ತೇಜು...
ಸ್ವಾರಿ ಕಣೆ...
ಅರೆ..ಮತ್ತೆ ಯಾಕ್ ಸ್ವಾರಿ ಕೇಳ್ತಿದ್ದೀಯಾ..
ತೇಜು...ಒಮ್ಮೆ ನಿನ್ನನ್ನ ನೋಡ್ಬೇಕು ಅನ್ಸ್ತು. ಕಣೊ..ಅದಕ್ಕೋಸ್ಕರ ಎಷ್ಟು ಒದ್ದಾಡಿದ್ದೇನೆ ಗೊತ್ತಾ..? ನಿನ್ನ ಮಾವನ ಮಗ ಪೂರ್ಣೇಶ್ ನನ್ನ ದೊಡ್ಡ ಅತ್ತೆ ಮಗಳ ಕ್ಲಾಸ್ಮೇಟ್..ಅವ್ಳಿಂದ ನಿನ್ನ ಅಡ್ರೆಸ್ ಸಿಗ್ತು. ಇವಾಗ ನಾನು ಬೆಂಗಳರ‍್ನಲ್ಲಿ ಫ್ಯಾಶನ್ ಡಿಸೈನಿಂಗ್ ಮಾಡ್ತಿದ್ದೀನಿ ಕಣೊ..ಮಾವನ ಮನೆಲೆ ಇದ್ಕೊಂಡು.
ಹೋ ಪೂರ್ಣೇಶ್ನಿಂದ ಅಡ್ರೆಸ್ ಸಿಗ್ತಾ..? ಹಾಗಾದ್ರೆ..ತುಂಬಾ ಕಷ್ಟಪಟ್ಟಿದ್ದೇನಿಲ್ಲ ಬಿಡು ಅಂತಂದೆ..ಸ್ವಲ್ಪ ತಮಾಷೆಯಾಗಿ.
ಈ ತಮಾಷೆಗೇನು ಕಡ್ಮೆ ಇಲ್ಲಾ ಕಣೊ ನೀನು...ಮೊದ್ಲು ಹೇಗಿದ್ದಿಯೋ ಹಾಗೇ ಇವಾಗ್ಲೂ..,
ಹ್ಹೆಹ್ಹೆ... ಎನಿ ಹೌ..ಫ್ಯಾಶನ್ ಡಿಸೈನಿಂಗ್ ಮಾಡ್ತಿದ್ದೀಯಾ..?
ಲೆಕ್ಚರರ್ ಆಗ್ಬೇಕು ಅಂತಿದ್ದೆ ಅಲ್ವಾ ಅಪರ್ಣಾ..? ಏನಾಯ್ತು..
ಹೌದು..ಕಣೊ, ನಿನ್ನನ್ನ ಇಷ್ಟ ಪಟ್ಟೆ... ನೀನ್ ಸಿಗ್ಲಿಲ್ಲ, ಲೆಕ್ಚರರ್ ಆಗ್ಬೇಕು ಅಂತಂದ್ಕೊಂಡೆ ಅದು ಆಗಿಲ್ಲ... ಆಗಿದ್ದೆಲ್ಲಾ ಕೆಟ್ಟದ್ದೆ ಕಣೊ..ಏನೆನಲ್ಲ ಆಗ್ಹೋಯ್ತು ಕಣೊ ನನ್ ಲೈಫ್ನಲ್ಲಿ ಅಂತ ಬಹಳ ಬೇಸರದಿಂದ ಹೇಳಿದ್ಲು ಆಕೆ.
ಏನಾಯ್ತು..?
ಹು..ಅದನ್ನ ತುಂಬಾ ಇಷ್ಟ ಪಡೋ ಒಂದು ಮನ್ಸಿನ್ ಜೊತೆ ಹೇಳ್ಕೋಳ್ಬೇಕು ಅಂತಾನೆ ಇಲ್ಲಿಗ್ ಬಂದಿದ್ದು ಕಣೊ..
ಆಗಿರೋದನ್ನ ಹೇಳೋದಕ್ಕೆ ಏನೋ ಒಂತರ ಹೇಸಿಗೆ ಆಗುತ್ತೆ..ಆದ್ರೆ ನೋವನ್ನ ಹಂಚ್ಕೊಂಡ್ರೆ ಏನೋ ಸ್ವಲ್ಪ ಆರಾಮಾಗುತ್ತೆ ಅಂತ ಯಾರೊ ದೊಡ್ಡವ್ರು ಹೇಳಿದ್ದು ಕೇಳಿದ್ದು.
ಅವಳ ಕಣ್ಣುಗಳು ಮತ್ತೆ ನೀರು ತುಂಬಿಸಿಕೊಂಡವು, ಆಕೆಯ ಮನಸ್ಸು ಯಾವುದೋ ಭಾರವನ್ನು ಇಳಿಸುವುದಕ್ಕೆ ಪ್ರಯತ್ನಿಸುತ್ತಿದ್ದು ನನಗೆ ಕಾಣ್ಸ್ತಿತ್ತು.
ನಾನು ಮೌನನಾದೆ. ತಲೆ ಬಗ್ಗಿಸಿದೆ.
ಆಕೆಯ ಬಲಗೈ ನನ್ನ ಗಲ್ಲವನ್ನು ಮುಟ್ಟಿ.., ಮೇಲೆಬ್ಬಿಸಿತು. ಏನೋ ತೇಜು..? ಅವಳು ಕೇಳಿದಳು.
ಸುಮ್ಮನೆ ತಲೆ ಅಲ್ಲಾಡಿಸಿದೆ.  ಆಕೆ ಮಾತು ಮುಂದುವರಿಸಿದಳು.
ನಾನು ಕೇಳುಗನಾದೆ.
ಆಕೆಯ ದನಿ ಕೊರಗಿನಿಂದ ಬಳಲಿದ್ದು..ಸ್ವರ ನಡುಗುತ್ತಿದ್ದದ್ದನ್ನು ಗಮನಿಸಿ ತಿಳಿಯಿತು.
ನಾನು.., ಬತ್ತಲು ಕಾಣಿಸುವುದನ್ನು ಇಣುಕುವ ಎಂಜಲು ನಾಯಿಗೆ ಬಲಿಯಾದೆ ಕಣೊ..ಅಂತಂದು ಕಣ್ಣೀರು ಸುರಿಸಿದಳು.
ನನ್ನ ಕಣ್ಣು ಆಶ್ರ‍್ಯದಿಂಧ ಒಂದು ಕ್ಷಣ ದೊಡ್ಡದಾದವು. ಕೆಲ ಹೊತ್ತಿನಲ್ಲೇ ನನ್ನನು ಕೇಳದೆ  ಕಣ್ಣಿರು ಸುರಿಸಿ ಬಿಟ್ಟವು..,
ಆಕೆ ಮೌನಳಾಗಲಿಲ್ಲ.., ನನ್ನ ಅತ್ತೆ ಮಗ..ನನ್ನನ್ನು ಬಲವಂತವಾಗಿ ಸೇರಿದ. ನಾನು ಅಸಹಾಯಕಳಾದೆ. ಹೆಣ್ಣಿನಲ್ಲಿ ಅಲ್ಲೊ,ಇಲ್ಲೊ ಸೆರಗಿನೊಳಗೆ ಕಾಣುವ ಬತ್ತಲು ಗಂಡು ಮನಸ್ಸನ್ನು ಅಷ್ಟು ಕೆರಳಿಸುತ್ತದಾ.. ತೇಜು..? ಎಂದು ಕೇಳಿದಳು.
ಏನು ಹೇಳಲಿ..ಮತ್ತೆ ಮೌನನಾದೆ. ಆಕೆ ಮೌನಳಾಗಲಿಲ್ಲ.
ವಿಷದ ಪಥ ನನಗೆ ದೇವರು ನನಗಿಷ್ಟವಿಲ್ಲದಿದ್ದರೂ ತೋರಿಸಿಕೋಟ್ಟ. ಅವನೊಬ್ಬ ಮೂರ್ಖ. ದೇವರನ್ನು ಬೈಯುತ್ತಿದ್ದಳು. ಅದರಲ್ಲೇ ಗೊತ್ತಾಗುತ್ತಿತ್ತು ಆಕೆ ಅವನಿಂದ ಎಷ್ಟು ಹಿಂಸೆ ಅನುಭವಿಸಿರಬಹುದು ಅಂತ.
ತೇಜು...ನೀನು ಗಂಡಸು ಕಣೊ.., ನಿನಗೊತ್ತು...
ಗಂಡು ಹೆಣ್ಣಿನ ಸಂಬಂಧ ಸೆಕ್ಸ್ ಇಂದ ಮಾತ್ರನೇನೋ..? ಅದು ನಿಜವಾದ ಪ್ರೀತಿನಾ..?
ನೋ.. ನಾನಂದೆ.
ಆತ ನನ್ನನ್ನ ಇಷ್ಟಪಡ್ತಿದ್ದ..,ಸೆಕ್ಸ್ಗಾಗಿ, ಆತ ಸೆಕ್ಸ್ ಬಗ್ಗೆ ನನ್ ಜೊತೆ ಯಾವುದೆ ಹೇಸಿಗೆಯಿಲ್ಲದೆ ಮಾತಾಡ್ತಿದ್ದ. ನನ್ನ ಸೊಂಟವನ್ನು ಸವರುತ್ತಿದ್ದ. ಹಿಂದಿನಿಂದ ನನ್ನನ್ನು ಗಟ್ಟಿಯಾಗಿ ತಬ್ಬಿ ಮೊಲೆಗಳನ್ನು ಹಿಂಡುತ್ತಿದ್ದ. ನನಗೆ ಅಸಹ್ಯವಾಗುತ್ತಿತ್ತು. ನನ್ನ ಪ್ರಷ್ಟವನ್ನು ತಟ್ಟಿ ಹಿಡಿಯುತ್ತಿದ್ದ. ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ನನ್ನನ್ನು ಬಂಧಿಸುತ್ತಿದ್ದ. ಯಾವುದೆ ಮುಚ್ಚುಮರೆಯಿಲ್ಲದೆ ಅಪರ್ಣಾ ತನಗಾದ ನೋವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಹೇಳುತ್ತಿದ್ದಳು.
 ಬ್ಲೂ ಫಿಲಂಗಳನ್ನು ತೋರಿಸುತ್ತಿದ್ದ, ನೀನು ಹೀಗೆ ನನಗೆ ಕೊಪರೇಟ್ ಮಾಡ್ಬೇಕು ಅಂತ ಹೇಳುತ್ತಿದ್ದ. ಹೆಣ್ಣು ಕಣೊ ನಾನು. ಯಾವುದೋ ನಾಯಿ ಮೊಲೆಗಳಿಗೆ ಬಾಯಿ ಹಾಕುವಾಗ ಹೇಗೆ ಸಹಿಸಿಕೊಳ್ಳಲಿ.., ಸಹಿಸಿಕೊಂಡೆ, “ಹೆಣ್ಣು” ಹುಟ್ಟಿದ್ದೆ ಕಷ್ಟ ತಿನ್ನುವುದಕ್ಕೆ. ತಿಂದಿದ್ದೇನೆ.
ಸಿಗರೇಟು ಸೇದುತ್ತಿದ್ದ, ಸಿಗರೇಟಿನ ಹೊಗೆಯನ್ನು ನನ್ನ ಮುಖಕ್ಕೆ ಬಿಡುತ್ತಿದ್ದ. ಯಾರಾದರೂ ಕಾಪಾಡಿ ಎಂದು ಜೋರಾಗಿ ಕಿರುಚಿಕೊಳ್ಳಲೆ.., ಮರ್ಯಾದೆ ಪ್ರಶ್ನೆ. ಹೆಣ್ಣು, ನಾನು ಈ ಸಮಾಜದಲ್ಲಿ ಬದುಕಬೇಕು. ಅದಕ್ಕೋಸ್ಕರ ಏನನ್ನೂ ಬೇಕಾದರೂ ಸಹಿಸಿಕೊಳ್ಳಬೇಕು. ಸೊಂಟದ ಕೆಳಗಿನ ಬಟ್ಟೆಗಳನ್ನು ಹರಿಯುತ್ತಿದ್ದ, ಇಷ್ಟ ಬಂದಹಾಗೆ ಸೇರುತ್ತಿದ್ದ. ಕಷ್ಟವಾಗುತ್ತಿತ್ತು ನನಗೆ, ಆ ನೋವನ್ನು ನುಂಗಿ ಅದುಮಿಟ್ಟುಕೊಳ್ಳುತ್ತಿದ್ದೆ. ನನಗೋ.., ಕಷ್ಟಗಳನ್ನು, ನೋವನ್ನು ಸಹಿಸಿಕೊಳ್ಳುವುದು ‘ಕಷ್ಟದ ಕೆಲಸವಾಗುತ್ತಿರಲಿಲ್ಲ’. ಆ ಪಾಪಿ ಈಗ ಬದುಕಿಲ್ಲ, ಆಕ್ಸಿಡೆಂಟ್ ಆಗಿ ನಾಯಿ ಸತ್ತು ಹೋದ ಹಾಗೆ ಸತ್ತು ನರಕಕ್ಕೆ ಹೋಗಿದೆ. ಅಷ್ಟು ಸಾಕಿತ್ತು ನನ್ನ ಮನಸ್ಸು ಹಗುರವಾಗುವುದಕ್ಕೆ. ಈಗ ಚೆಂದವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದೇನೆ. ಅಂತಂದ್ಲು.
ಆಕೆಯ ದೇಹದ ಭಾವ ಸತ್ತುಹೋಗಿ ದುರ್ನಾತ ಬೀರುತ್ತಿದ್ದದ್ದು ಮೂಗಿಗೆ ಬಡಿಯುತ್ತಿತ್ತು. ಆದರೆ ಅವಳು ಮನಸ್ಸನ್ನು ಸಾಯುವುದಕ್ಕೆ ಬಿಡಲಿಲ್ಲ. ಅದು ಅವಳ ಮಾತಿನಲ್ಲಿ ತೋರುತ್ತಿತ್ತು.
ಬದುಕಿನಲ್ಲಿ ಬಂದ ಎಲ್ಲಾ ಕಷ್ಟಗಳನ್ನು ಕುಗ್ಗದೆ, ಸೆಟೆದು ನಿಲ್ಲುವ ಕೆಚ್ಚೆದೆ ಅಪರ್ಣಾಳಿಗೆ ಇದ್ದ ಹಾಗೆ ಎಲ್ಲಾ ಹೆಣ್ಣು ಮನಸ್ಸಿನವರಿಗೆ ಇರಬೇಕು ಅನ್ಸು÷್ತ ನನಗೆ.
ಈ ನಡುವೆ ಒಂದು ಪ್ರಶ್ನೆ ಆಕೆಗಿತ್ತೆ ಒಬ್ಬ ಲಾಯರ್ ಆಗಿ. ನೀನು ನಿನಗಾದ ನೋವಿಗೆ ಪ್ರತಿಕಾರ ತೀರಿಸಿಕೊಳ್ಳುವುದಕ್ಕೆ ಜಸ್ಟಿಸ್‌ಗೆ ಮೊರೆ ಹೋಗ್ಬಹುದಿತ್ತಲ್ವಾ ? ಎಂದು.
ಅವನ ಮೇಲೆ ಕಂಪ್ಲೆಂಟ್ ಕೋಟ್ಟಿದ್ರೆ .., ಕೇಸಲ್ಲಿ ಗೆಲ್ಬಹುದಿತ್ತೇನೋ..,ಆದರೆ ಮನಸ್ಸಿಗೆ, ದೇಹಕ್ಕಾದ ನೋವನ್ನು ಅಳಸಿ ಹಾಕುವುದಕ್ಕೆ ಸಾಧ್ಯವಿಲ್ಲವಲ್ಲ.., ಒಂದು ವೇಳೆ ನಾನು ಅಳಿಸಿ ಹಾಕುವುದಕ್ಕೆ ಪ್ರಯತ್ನಪಟ್ಟರೂ.., ಈ ಸಮಾಜ ನನಗೆ ಮತ್ತೆ ಮತ್ತೆ ನೆನಪಿಸುತ್ತದೆ ಅಲ್ವಾ..?  ದೇವರು ಮೊದಲು ನನಗೆ ಎಷ್ಟು ಕಷ್ಟ ಕೊಟ್ಟಿದ್ರೂ ಕೂಡ, ಕೊನೆಗೆ ಅವನಿಗೆ ದುರಂತ ಸಾವಿನ ಶಿಕ್ಷೆ ಕೊಟ್ಟಿದ್ದಾನಲ್ಲ..ಅಷ್ಟು ಸಾಕು...ಅಂತಂದ್ಲು.
ಹೌದು, ಒಂದು ರೀತಿಯಲ್ಲಿ ಆಕೆಯ ನಿರ್ಧಾರವೂ ಸರಿ ಅನ್ನಿಸಿತು.
ಹ್ಹು ಅಂತಂದೆ ನಾ.
 ನಾನು ನನ್ನ ನೋವುಗಳನ್ನ ಹೇಳ್ಕೋಂಡು ನಿನಗೂ ನೋವು ಕೊಟ್ಟೆ. ಸ್ವಾರಿ ಕಣೊ ತೇಜು ಅಂದ್ಲು.
ಹ್ಹೇ..ಇಲ್ಲಾ ಕಣೆ ಅಪರ್ಣಾ..ನಿನ್ನ ನೋವಿಗೆ ಇಷ್ಟೂ ರೆಸ್ಪಾನ್ಸ್ ಮಾಡ್ದೆ ಇದ್ರೆ ಹೇಗೆ ಅಂದೆ.
ಸ್ವಾರಿ ಕಣೆ.., ಐ ಆಮ್ ರಿಯಲಿ ಹೆಲ್ಪ್ ಲೆಸ್..
ಇಟ್ ಇಸ್ ಒಕೆ..ಅದು ನನ್ನ ದರಿದ್ರ, ಈಗ ದೂರಹೋಗಿದೆ. ಇರಲಿ ಬಿಡು. ಸರಿ ಇಷ್ಟೋತನಕ ನನ್ ಬಗ್ಗೆನೆ ಹೇಳ್ತಿದ್ದೀನಿ. ಅಷ್ಟೆ ಅಲ್ಲದೆ ಟೈಮ್ ವೇಷ್ಟ್ ಮಾಡ್ದೆ...ಸ್ವಾರಿ ಕಣೊ. ಮದ್ವೆ  ಆಯ್ತು ಅಂದೆ...ಹೆಂಡ್ತಿ ಹೆಸರೇನು.? ಮಗುವಿನ ಹೇಸರೇನು ಏನೂ ಹೇಳಿಲ್ಲ ನೀನು. ಯಾರಿಗೂ ಹೇಳ್ಬರ‍್ದು ಅಂತ ಹೇಳಿದ್ದಾರಾ..?
ಹ್ಹೆಹ್ಹೆಹ್ಹೆ... ಹಾಗೇನಿಲ್ಲ ಕಣೆ. ಹೆಂಡ್ತಿ ಹೆಸರು ಅವಿತ ಅಂತ, ಮ್ಯಾತಮೆಟಿಕ್ಸ್ ಲೆಕ್ಚರರ್, ಇಲ್ಲೆ ಗವರ್ನಮೆಂಟ್ ಡಿಗ್ರಿ ಕಾಲೇಜಲ್ಲಿ ವರ್ಕ್ ಮಾಡ್ತಾಳೆ. ಮಗುವಿಗೆ ಕೃತಿ ಅಂತ ಹೆಸರಿಟ್ಟಿದ್ದೇನೆ. ನೆಡಿತಿದೆ ಎಲ್ಲರ ಲೈಫ್ನಲ್ಲಿ ಇದ್ದ ಹಾಗೆ ಏರಿಳಿತಗಳು ನಮ್ ಲೈಫ್ನಲ್ಲೂ ಇದೆ. ಏನೋ ಸಧ್ಯಕ್ಕೆ ಚೆನ್ನಾಗ್ ನೆಡಿತಿದೆ.
ಹೀಗೆ ಸುಖವಾಗಿರಲಿ, ಖುಷಿಖುಷಿಯಾಗಿರಿ ಲೈಫ್ ಲಾಂಗ್ ಒಕೆ. ಅಂತಂದ್ಲು.
ಎಷ್ಟೇ ನೋವು ಮನ್ಸಲ್ಲಿದ್ರು, ಇನ್ನೊಬ್ಬರಿಗೆ ಖುಷಿಖುಷಿಯಾಗಿ ಇರಿ ಅಂತ ಹೇಳೋ ಅವಳ ಮನಸ್ಸು ಗ್ರೇಟ್ ಅನ್ಸ್ತು ನನಗೆ.

  -ಕಾವ್ಯ ಬೈರಾಗಿ 

2 comments:

  1. Nija anta harrasment adaga bayibidodilla coz samaja ah amayaka hennanna nodo reethi badalagutte. Badkiddastu dina naralbekagutte. Well written my dear. These r all common issues happening evrywher

    ReplyDelete