ಇದು ಸರಿಸುಮಾರು ಒಂದು ತಿಂಗಳುಗಳಿಂದ ಕಸ್ಟಮರ್ ಕಡೆಯಿಂದ ಬರುತ್ತಿರುವ ಕಂಪ್ಲೆಂಟ್ ಎಂದು ಹೆಚ್ಚಿನ ಮೋಬೈಲ್ ಅಂಗಡಿಯ ಮಾಲಿಕರು ಆಡಿಕೊಳ್ಳುತ್ತಿರುವ ಮಾತುಗಳು.
ಹೌದು, ಇದು ಬೇರೆ ಯಾವುದೇ ಸಿಮ್‌ನ ಕಥೆಯಲ್ಲ. ಭಾರತದ ಅಗ್ರಗಣ್ಯ ಮೊಬೈಲ್ ನೆಟ್‌ವರ್ಕ್ ಏರ್‌ಟೆಲ್ ಸಿಮ್‌ನ ಬಗೆಗಿರುವ ಬಳಕೆದಾರರ ಕಂಪ್ಲೆಂಟ್.
ದೇಶದಲ್ಲಿ 4ಜಿ ನೆಟ್‌ವರ್ಕ್, ಬಳಕೆಗೆ ಬಂದು ವರ್ಷ ಕಳೆಯಿತು. ಆದರೂ ಇನ್ನೂ ೩ಜಿ ಸಿಮ್‌ಗಳನ್ನೇ ಬಳಸುತ್ತಿದ್ದಾರೆ. ಇನ್ನು ಕೆಲವರು 3ಜಿ ಸಿಮ್‌ಗಳನ್ನು 4ಜಿ ಗೆ ಕನ್ವರ್ಟ್ ಮಾಡಿಕೊಂಡಿದ್ದಾರೆ. 4ಜಿ ನೆಟ್‌ವರ್ಕ್ಗಳಿಗೆ ಸಿಮ್‌ನ್ನು ಅಪ್‌ಗ್ರೇಡ್ ಮಾಡುವ ಧಾವಂತದಲ್ಲಿ ಸಿಮ್‌ನ ಗುಣಮಟ್ಟಕ್ಕೆ ಏರ್‌ಟೆಲ್ ಹೆಚ್ಚು ಗಮನಕೊಟ್ಟಿಲ್ಲದಂತೆ ಕಾಣುತ್ತಿದೆ.
ಕಳೆದ ಡಿಸೆಂಬರ್‌ನಲ್ಲಿ ತನ್ನೆಲ್ಲಾ ಕಾಲ್, ಮೆಸೆಜ್ ಹಾಗೂ ಇಂಟರ್‌ನೆಟ್ ಸೇವೆಗಳ ದರವನ್ನು ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್ ನೀಡಿದ ಏರ್‌ಟೆಲ್ ಈಗ ತನ್ನ ಕಳಪೆ ಗುಣಮಟ್ಟದ ಸಿಮ್ ಕಾರ್ಡ್ ಹಾಗೂ ನೆಟ್‌ವರ್ಕ್ನ ಸೇವೆಗಳಿಂದ ಬಳಕೆದಾರರ ಆಕ್ರೋಶಕ್ಕೆ ತುತ್ತಾಗಿದೆ ಎನ್ನುವುದಕ್ಕೆ ಏರ್‌ಟೆಲ್ ಬಳಕೆದಾರರಿಂದ ಮೇಲಿಂದ ಮೇಲೆ ಕೇಳಿಬರುತ್ತಿರುವ ಕಂಪ್ಲೆಂಟ್ ಸಾಕ್ಷಿ.
ಈಗಾಗಲೇ ದೇಶದ ಕೆಲವು ಕಡೆ ಏರ್‌ಟೆಲ್ ತನ್ನ 3ಜಿ ನೆಟ್‌ವರ್ಕ್ನ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಭಾರ್ತಿ ಏರ್‌ಟೆಲ್ ಕಂಪೆನಿ ತನ್ನ ಬಳಕೆದಾರರಿಗೆ ಸಿಮ್ ಅಪ್‌ಗ್ರೇಡ್ ಮಾಡಿಕೊಳ್ಳಿ ಎಂಬ ಸೂಚನೆಯನ್ನೂ ಮೊದಲೇ ನೀಡಿದೆ ಆದರೂ, ತನ್ನ 4ಜಿ ಹೊಸ ಸೇವೆಗಳಿಗೆ ನೀಡುತ್ತಿರುವ ಸಿಮ್ ಕಾರ್ಡ್ಗಳು, ನೆಟ್‌ವರ್ಕ್ಗಳು ಅತ್ಯಂತ ಕಳಪೆ ಮಟ್ಟದ್ದಾಗಿವೆ ಎನ್ನುವುದು ಏರ್‌ಟೆಲ್ ಕಸ್ಟರ‍್ಸ್ ಅಳಲಾಗಿದೆ. ತನ್ನ ಸೇವೆಯ ದರವನ್ನು ಹೆಚ್ಚಳ ಮಾಡಿ ಸಾಮಾನ್ಯ ವರ್ಗದವರ ಕಣ್ಣೀರಿಗೆ ಕಾರಣವಾದ ಏರ್‌ಟೆಲ್ ಕಂಪೆನಿ, ಈಗ ಇಂತಹ ತೊಂದರೆಗಳಿಂದ ಬಳಕೆದಾರರಿಗೆ ಭ್ರಮನಿರಸನ ಉಂಟು ಮಾಡಿದೆ. ಈ ಸಮಸ್ಯೆಯನ್ನು ನಿವಾರಿಸುವಲ್ಲಿ ಭಾರ್ತಿ ಏರ್‌ಟೆಲ್ ಕಂಪೆನಿ ಸೋತರೇ, ತನ್ನ ಬಳಕೆದಾರರನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದರಲ್ಲಿ ಏನೂ ಸಂದೇಹವಿಲ್ಲ. ಇನ್ನಾದರೂ ಕಂಪೆನಿ ತನ್ನ ನೆಟ್‌ವರ್ಕ್ ಹಾಗೂ ಸಿಮ್ ಕಾರ್ಡ್ನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗಿದೆ.
-ಶ್ರೀರಾಜ್ ವಕ್ವಾಡಿ.

👌
ReplyDelete