ಚಾಕು, ಪಿಸ್ತೂಲು,
ತಲ್ವಾರಿನ ಮೇಲೆ
ನಿಂತವುಗಳನ್ನು
ಸಿದ್ದಾಂತವೆನ್ನಲಾರೆ...!
ದೇವರನ್ನು ಮಾರುವ
ಧರ್ಮವನ್ನು ಪಾಲಿಸಲಾರೆ...!
ಹಿಂದು, ಮುಸ್ಲಿಂ, ಕ್ರಿಶ್ಚಿಯನ್
ಎಲ್ಲರಲ್ಲೂ ವಿವೇಕಾನಂದರಿದ್ದಾರೆ,
ಗಾಂಧಿ ಇದ್ದಾರೆ, ಗೋಡ್ಸೆಯೂ...!
ತತ್ವ, ಸಿದ್ದಾಂತಗಳ ಕಾರ್ಯ..
ಧೂಳಿಪಟಗೊಳಿಸುವುದಲ್ಲ..!
ಗುಡಿ, ಚರ್ಚು, ಮಸೀದಿಗಳು
ನಂಬಿಕೆಗಳ ಮಾರುಕಟ್ಟೆಯಲ್ಲ..!
ಹೇರಿಕೆಗಳನ್ನಂಟಿಸಿಕೊಳ್ಳದ
ನಡೆಯೇ ಧರ್ಮ,
ಎಲ್ಲರೊಳಗೂ
ಹಿತವನ್ನುಳಿಸುವುದೇ ಸಿದ್ದಾಂತ..!
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)
Nice
ReplyDeleteThank You
DeleteNice
ReplyDeleteYes absolutely 👌😊 very nice
ReplyDeleteThank you
DeleteVaasthava
ReplyDeleteThank you
Delete