Thursday, February 14, 2019

ಸಲಾಂ


ಎಸಗಿದೆ ದಾಳಿ
ಪಾತಕಿಗಳ ದಂಡು
ಗಡಿ ರೇಖೆಯ ದೂಡಿ...
ಹರಿದಿದೆ ಗಡಿ ಸೇನಾನುಚರರ
ನೆತ್ತರ ಕೋಡಿ..!
"ಕಿಚ್ಚು" ಆರುವ ಮುನ್ನ
ಹೊತ್ತಿ ಉರಿಯದೇ 
ನಂದುವುದೇ..!?!
ಹೃದಯಕ್ಕೆ ಚುಚ್ಚಿದ ನೋವಿಗೆ
ಪ್ರತಿಕಾರ ತೀರಿಸದೆ ಮಣಿಯುವುದೇ
ನನ್ನವರ ಅನಂತ ಶಕ್ತಿ..!?

ಧಗಧಗನೆ ಉರಿಯುತ್ತಿದೆ
ಗಡಿ ಸೇವಕರ ಬಲಿದಾನದ ಬೆಂಕಿ

ಶತ್ರು ಪಾಳಯಕ್ಕೆ ಮುಖಮಾಡಿ
ಬಂದೂಕು ಹಿಡಿದು ದೇಶ ಕಾಯುತ್ತಿದ್ದ
ಯೋಧರೆಲ್ಲಾ ಹುತಾತ್ಮರಾಗಿ ಮಲಗಿದ್ದಾರೆ...!!!
ರೋಷದ ಜ್ವಾಲೆಯಲ್ಲಿಯೇ
'ದೇಶ ಸೇವಕರ' ಆತ್ಮಕ್ಕೆ ಸಲಾಂ..!
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)


No comments:

Post a Comment